ಕಾರ್ಕಳ:(ಫೆ.17) ಕಫದ ಸಮಸ್ಯೆಯಿಂದ ಮೂರು ತಿಂಗಳ ಮಗು ಸಾವನ್ನಪ್ಪಿರುವ ಘಟನೆ ನಿಂಜೂರು ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: ಕ್ಕಮಗಳೂರು: ತಲೆಗೆ ಸುತ್ತಿಗೆಯಿಂದ ಹೊಡೆದು ಅತ್ತೆಯ ಭೀಕರ ಹತ್ಯೆ ಮಾಡಿದ ಅಳಿಯ
ನಿಂಜೂರು ಗ್ರಾಮದ ಪೂರ್ಣಿಮಾ ಅವರ ಮೂರು ತಿಂಗಳ ಗಂಡು ಮಗು ಧನ್ವಿತ್ ಮೃತ ಮಗು. ಮಗುವಿಗೆ ಕಫದ ಸಮಸ್ಯೆ ಉಲ್ಬಣಗೊಂಡಿತ್ತು, ಚಿಕಿತ್ಸೆಗಾಗಿ ಕಾರ್ಕಳದ ಖಾಸಗಿ ಆಸ್ಪತ್ರೆ ಕರೆದೊಯ್ಯಲಾಗಿತ್ತು.


ಮಗುವನ್ನು ಪರೀಕ್ಷಿಸಿದ ವೈದ್ಯರು ಮಗು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


