Sun. Feb 23rd, 2025

Hubballi: ಮುದಿ ಅಂಕಲ್ ಜೊತೆ 18 ವರ್ಷದ ಯುವತಿ ಪರಾರಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಇಬ್ಬರು ಮದುವೆಯಾಗಿ ಪತ್ತೆ

ಹುಬ್ಬಳ್ಳಿ:(ಫೆ.18) ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಒಂದು ವಿಚಿತ್ರ ಲವ್ ಸ್ಟೋರಿ ಪ್ರಕರಣ ಬೆಳಕಿಗೆ ಬಂದಿತ್ತು. ಮುದಿ ಅಂಕಲ್ ಮೊಮ್ಮಗಳ ವಯಸ್ಸಿನ 18 ವರ್ಷದ ಹುಡುಗಿ ಜೊತೆ ಲವ್ವಿ ಡವ್ವಿ ಅಂತ ಶುರು ಮಾಡಿದ್ದು, ಆ ಯುವತಿಯ ತಲೆಕೆಡಿಸಿ ಆಕೆಯೊಂದಿಗೆ ಅಂಕಲ್ ಊರು ಬಿಟ್ಟು ಪರಾರಿಯಾಗಿಯಾಗಿದ್ದನು. ಅಚ್ಚರಿಯೇನೆಂದರೆ ಇದೀಗ ಇವರಿಬ್ಬರು ಮದುವೆಯಾಗಿ ಪತ್ತೆಯಾಗಿದ್ದಾರೆ.

ಇದನ್ನೂ ಓದಿ: ಕಕ್ಕಿಂಜೆ: ಕಕ್ಕಿಂಜೆ ಶಾಲೆಯಲ್ಲಿ ಮಕ್ಕಳ ಮೇಲೆ ಹೆಜ್ಜೇನು ದಾಳಿ

18 ವರ್ಷ ಯುವತಿ ಹಾಗೂ 50 ವರ್ಷ ಅಂಕಲ್ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹುಬ್ಬಳ್ಳಿಯಿಂದ ಕೊಲ್ಲಾಪುರದ ಅಜ್ಜಿ ಮನೆಗೆ ಹೋಗುವುದಾಗಿ ನಾಪತ್ತೆಯಾಗಿದ್ದ 18 ವರ್ಷದ ಯುವತಿ ಇದೀಗ 50 ವರ್ಷದ ವ್ಯಕ್ತಿ ಜೊತೆಗೆ ಮದುವೆಯಾಗಿದ್ದಾಳೆ. ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕರೀಷ್ಮಾ ಹಾಗೂ ಪ್ರಕಾಶ್ ಮದುವೆಯಾಗಿರುವ ಫೋಟೋವನ್ನು ಪ್ರಕಾಶ್ ವಾಟ್ಸಪ್ ಸ್ಟೇಟಸ್​ ಹಾಕಿಕೊಂಡಿದ್ದಾರೆ. ಇದರಿಂದ ಶಾಕ್ ಆದ ಪೋಷಕರು ನಮ್ಮ ಮಗಳ ತಲೆಕೆಡಿಸಿ ಮದುವೆಯಾಗಿದ್ದಾನೆಂದು ಆರೋಪಿಸಿದ್ದಾರೆ.

ಸೆಕ್ಯೂರಿಟಿ ಕೆಲಸ ಮಾಡುತ್ತಿರುವ 50 ವರ್ಷದ ಪ್ರಕಾಶ್​ಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳೂ ಸಹ ಇವೆ. ಇದರ ಬೆನ್ನಲ್ಲೇ ಇದೀಗ 18 ವರ್ಷದ ಕರೀಷ್ಮಾ ಎನ್ನುವ ಯುವತಿಯನ್ನು ಸಹ ಮದುವೆಯಾಗಿದ್ದಾರೆ. ದೇವಸ್ಥಾನದಲ್ಲಿ ಕರೀಷ್ಮಾಳ ಜೊತೆ ಮದುವೆಯಾಗಿರುವ ಫೋಟೋವನ್ನು ಪ್ರಕಾಶ್ ಸ್ಟೇಟಸ್ ಹಾಕಿಕೊಂಡಿದ್ದಾರೆ.

ಪ್ರೇಮ್ ಕಹಾನಿ ಶುರುವಾಗಿದ್ದು ಹೇಗೆ?

ಕರೀಷ್ಮಾ ಹಾಗೂ ಪ್ರಕಾಶ್ ಈ ಮೊದಲೇ ಪ್ರೀತಿ, ಪ್ರೇಮ ಅಂತ ಇದ್ದರು. ಮದುವೆಯಾಗಿ ಎರಡು ಮಕ್ಕಳಿರುವ ಆರೋಪಿ ಪ್ರಕಾಶ್, 2 ವರ್ಷದ ಹಿಂದೆಯೇ ಕರೀಷ್ಮಾಳನ್ನು ಪ್ರೀತಿಸುತ್ತಿದ್ದ. ಆಗ ಕರೀಷ್ಮಾ ಅಪ್ರಾಪ್ತೆಯಾಗಿದ್ದಳು. ಇದಕ್ಕೆ ಹುಡುಗಿಯ ಮನೆಯವರು ಆಕ್ಷೇಪ ವ್ಯಕ್ತಪಡಿಸಿ, ಆಕೆಯ ಮನಃ ಪರಿವರ್ತನೆ ಮಾಡಲು ಮುಂದಾಗಿದ್ದರು.

ಅಷ್ಟೇ ಅಲ್ಲದೆ, ಆರೋಪಿಯ ವಿರುದ್ಧ ದೂರು ನೀಡಿದ್ದರು. ಇದರಂತೆ ಪ್ರಕಾಶನ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಹುಬ್ಬಳ್ಳಿಯಲ್ಲಿಯೇ ಇದ್ದರೆ ಸಮಸ್ಯೆ ಆಗುತ್ತದೆ ಎಂದು ಹುಡುಗಿಯ ಮನೆಯವರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಇರುವ ಅಜ್ಜಿ ಮನೆಯಲ್ಲಿ ಬಿಟ್ಟಿದ್ದರು. ಅಂದಿನಿಂದ ಆಕೆ ಅಲ್ಲಿಯೇ ವಾಸವಾಗಿದ್ದಳು. ಆದರೆ ಆಕೆ, ಜನವರಿ 3 ರಂದು ಅಲ್ಲಿಂದ ನಾಪತ್ತೆಯಾಗಿದ್ದಳು. ಆ ಬಳಿಕ ಆಕೆಯ ಬಗ್ಗೆ ಯಾವುದೇ ಮಾಹಿತಿ ದೊರೆತಿರಲಿಲ್ಲ. ಇದೀಗ ಕರೀಷ್ಮಾಗೆ 18 ವರ್ಷ ತುಂಬಿದ್ದರಿಂದ ಮದುವೆ ಮಾಡಿಕೊಂಡು ಪ್ರಕಾಶನ ಜೊತೆಯಲ್ಲೇ ಇರುವುದು ಗೊತ್ತಾಗಿದೆ.

Leave a Reply

Your email address will not be published. Required fields are marked *