ಉತ್ತರ ಪ್ರದೇಶ:(ಫೆ.18)ಹಿಂದೂ ಯುವಕನೊಬ್ಬನಿಗೆ ಮುಸ್ಲಿಂ ಯುವತಿ ಮೇಲೆ ಪ್ರೇಮಾಂಕುರವಾಗಿತ್ತು, ಬಳಿಕ ಆತ ರಾಹುಲ್ನಿಂದ ಮುರ್ಷಿದ್ ಆಗಿ ಕೇವಲ ಹೆಸರು ಬದಲಾಯಿಸಿಕೊಂಡಿದ್ದು ಮಾತ್ರವಲ್ಲದೆ,

ಇದನ್ನೂ ಓದಿ: ಕತಾರ್ : ಬಿಲ್ಲವಾಸ್ ಕತಾರ್ ನ ಅಧ್ಯಕ್ಷ ಶ್ರೀ ಸಂದೀಪ್ ಸಾಲಿಯಾನ್ ರವರಿಗೆ ವಿನಯಪೂರ್ವಕ ಬೀಳ್ಕೊಡುಗೆ
ಆತ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ. ಆದರೆ ಆಕೆ ಬೇರೊಬ್ಬನನ್ನು ಮದುವೆಯಾಗಿದ್ದಾಳೆಂದು ತಿಳಿದು ಕೋಪಗೊಂಡ ಆತ ಆಕೆಯನ್ನು ಹತ್ಯೆ ಮಾಡಿದ್ದಾನೆ. ಆಕೆಯ ಕುಟುಂಬದವರು ಅದೇ ಕೋಪದಲ್ಲಿ ಮುರ್ಷಿದ್ ನನ್ನು ಕೊಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇಬ್ಬರ ಪ್ರೇಮ ಸಾವಿನಲ್ಲಿ ಅಂತ್ಯ ಕಂಡಿತ್ತು.
ಮುರ್ಷಿದ್ ಕಳೆದ ಎರಡು ವರ್ಷಗಳಿಂದ ಮುಸ್ಲಿಂ ಯುವತಿ ಜತೆಗೆ ಡೇಟಿಂಗ್ ಮಾಡುತ್ತಿದ್ದ, ಆಕೆಗಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ, ನಮಾಜ್ ಮಾಡುವುದನ್ನು ಕೂಡ ಕಲಿತಿದ್ದ. ಆದರೂ ದಾಖಲೆಗಳಲ್ಲಿ ಆತ ಇನ್ನೂ ಹಿಂದೂವಾಗಿಯೇ ಇದ್ದಾನೆ.



ವರದಿಗಳ ಪ್ರಕಾರ ತನ್ನ ಹುಡುಗಿ ಫೆಬ್ರವರಿ 16ರಂದು ಬೇರೆ ಹುಡುಗನ ಜತೆ ವಿವಾಹವಾಗಿರುವುದನ್ನು ತಿಳಿದು ಆಕೆಯನ್ನು ಭೇಟಿಯಾಗಲು ಹೋಗಿದ್ದ, ಆದರೆ ಇಬ್ಬರ ನಡುವೆ ಜಗಳ ನಡೆದು ಗೆಳತಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ.

ಸ್ವಲ್ಪ ಸಮಯದ ಬಳಿಕ ಹುಡುಗಿಯ ಕುಟುಂಬದವರು ಬಂದು ಮುರ್ಷದ್ನನ್ನು ಕ್ರೂರವಾಗಿ ಥಳಿಸಿದ್ದರು, ಪೊಲೀಸರು ಸ್ಥಳಕ್ಕೆ ಆಗಮಿಸಿ ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
