ನೆರಿಯ:(ಫೆ.20) ನೆರಿಯ ಗ್ರಾಮದ ಅಕ್ಕೋಳೆ ಎಂಬಲ್ಲಿ ಹಾಡಹಾಗಲೇ ಕಳ್ಳರು ಮನೆಯ ಗೋದ್ರೆಜ್ ನ ಬಾಗಿಲು ತೆರೆದು ರೂ. 3,12,000/- ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ಫೆ.19 ರಂದು ನಡೆದಿದೆ.

ಇದನ್ನೂ ಓದಿ: ಬಂಟ್ವಾಳ: ಸ್ಕೂಟರ್ ಗೆ ಕಾರು ಡಿಕ್ಕಿ
ಫಾತಿಮತ್ ರಂಝೀನ್ ರವರ ದೂರಿನಂತೆ ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಫೆ. 19 ರಂದು ಬೆಳಿಗ್ಗೆ ನೆರಿಯ ಗ್ರಾಮದ ಅಕ್ಕೋಳೆ ಎಂಬಲ್ಲಿರುವ ಮನೆಯಲ್ಲಿ, ಮನೆಯ ಬಾಗಿಲು ತೆರೆದಿಟ್ಟು ಅಡುಗೆ ಕೋಣೆಯಲ್ಲಿ ಕೆಲಸ ಮಾಡಿಕೊಂಡಿದ್ದು,

ಸುಮಾರು ಬೆಳಿಗ್ಗೆ 9.30 ಗಂಟೆಗೆ ತನ್ನ ಮನೆಯಲ್ಲಿರುವ ಕೋಣೆಗೆ ಹೋದಾಗ ಗೋದ್ರೆಜ್ ನ ಬಾಗಿಲು ತೆರೆದು ಬಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿರುವುದು ಕಂಡುಬಂದಿದೆ.


ಗೋದ್ರೆಜ್ ನಲ್ಲಿ ನೋಡಿದಾಗ ಅದರಲ್ಲಿ ಇಟ್ಟಿದ್ದ ಸುಮಾರು 52 ಗ್ರಾಂ ಚಿನ್ನಾಭರಣಗಳು ಕೂಡಾ ಕಾಣೆಯಾಗಿರುತ್ತದೆ.

ಈ ಬಗ್ಗೆ ಫಾತಿಮತ್ ರಂಝೀನ್ ಅಡುಗೆ ಕೋಣೆಯಲ್ಲಿ ಇದ್ದ ಸಮಯ ಯಾರೋ ಕಳ್ಳರು ಮನೆಯೊಳಗೆ ಬಂದು ಸುಮಾರು ರೂ. 3,12,000/- ರೂ ಮೌಲ್ಯದ 52 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು , ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
