Sat. Feb 22nd, 2025

Guruvayankare: ವಾರ್ಷಿಕ “ದಿಕ್ರ್ ಹಲ್ಖಾ” ಕಾರ್ಯಕ್ರಮ – ಉನ್ನತ ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

ಗುರುವಾಯನಕೆರೆ:(ಫೆ.21) ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಮತ್ತು ಜುಮ್ಮಾ ಗುರುವಾಯನಕೆರೆ ಇಲ್ಲಿ ವಾರ್ಷಿಕ ದಿಕ್ರ್ ಹಲ್ಖಾ ಸಮಾವೇಶ, ಮತಪ್ರವಚನ ಹಾಗೂ ಉನ್ನತ ವ್ಯಾಸಂಗಕ್ಕೆ ತೆರಳುವ ದರ್ಸ್ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಫೆ.17 ರಂದು ಗುರುವಾಯನಕೆರೆ ಮಸ್ಜಿದ್ ಅಂಗಣದಲ್ಲಿ ಜರುಗಿತು.

ಇದನ್ನೂ ಓದಿ: ಮಾಲಾಡಿ: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಕಾರು


ಸಯ್ಯಿದ್ ಪೊಮ್ಮಾಜೆ ತಂಙಳ್ ದರ್ಗಾ ಝಿಯಾರತ್ ಗೆ ನೇತೃತ್ವ ನೀಡಿದರು. ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಎಸ್.ಎಮ್.ಎಸ್ ಅಬ್ದುಲ್ ಲೆತೀಫ್ ಹಾಜಿ ವಹಿಸಿದ್ದರು.

ಉದ್ಘಾಟನೆಯನ್ನು ಸಯ್ಯಿದ್ ವಾದಿ ಇರ್ಫಾನ್ ತಂಙಳ್ ಸಬರಬೈಲು ನೆರವೇರಿಸಿದರು. ಕೇರಳದ ಪ್ರಸಿದ್ಧ ವಾಗ್ಮಿಗಳಾದ ಮುಹಮ್ಮದ್ ರಾಶಿದ್ ಬುಖಾರಿ ಕುಟ್ಯಾಡಿ ಮುಖ್ಯ ಪ್ರವಚನ‌ ನಡೆಸಿಕೊಟ್ಟರು. ಸಮಾರಂಭದ ನೇತೃತ್ವ ಮತ್ತು ಅಂತಿಮ ದುಆ ವಿಧಿಯನ್ನು ಸಯ್ಯಿದ್ ಸಾದಾತ್‌ ತಂಙಳ್ ಬಾ ಅಲವಿ ನೆರವೇರಿಸಿದರು. ಮುಂದಿನ ಮಾಸಿಕ ಕಾರ್ಯಕ್ರಮಗಳಿಗೆ ವಾಗ್ದಾನ ನಡೆಸಿಕೊಟ್ಟರು.

ಈ‌ ಸಮಾರಂಭದಲ್ಲಿ ಹಬೀಬ್ ಸಖಾಫಿ ಅಲ್ ಮುಈನಿ, ಯಾಕೂಬ್ ಮುಸ್ಲಿಯಾರ್ ಮೇಲಂತಬೆಟ್ಟು, ಜಿ.ಎಸ್ ಆದಂ ಸಾಹೇಬ್, ಮುಹಮ್ಮದ್ ಆಸಿಫ್ ಮಿಸ್ಬಾಹಿ, ಮುಹಮ್ಮದ್ ಶರೀಫ್ ಝುಹ್ರಿ, ಅಬ್ದುರ್ರಹೀಂ ಸಖಾಫಿ ಅಲ್ ಹಿಮಮಿ, ನಿಝಾರ್ ಕೆ.ಪಿ, ಮುಹಮ್ಮದ್ ರಫಿ, ಜಿ ಮುತ್ತಲಿಬ್, ಜಿ.ಕೆ ಉಮರಬ್ಬ, ಹಾಜಿ ಹಸೈನಾರ್ ಶಾಫಿ, ಕೆ.ಎ ಉಸ್ಮಾನ್ ಬಳಂಜ, ಅಬ್ದುಲ್ ಹಕೀಂ ಶಾಫಿ ಸುನ್ನತ್‌ಕೆರೆ, ಬಿ. ಕಾಸಿಂ ಬದ್ಯಾರು, ಅಬ್ದುಲ್‌ ಅಝೀಝ್ ಬಳಂಜ, ಸಯ್ಯಿದ್ ಕೋಂಟುಪಲಿಕೆ, ಕರಿಂ ಹಾಜಿ, ಬಿ.ಎ ನಝೀರ್, ಹಂಝ ಮದನಿ ತೆಂಕಕಾರಂದೂರು ಮೊದಲಾದವರು ಉಪಸ್ಥಿತರಿದ್ದರು.

ಗುರುವಾಯನಕೆರೆ ಧಾರ್ಮಿಕ ದರ್ಸ್‌ನಲ್ಲಿ ಧಾರ್ಮಿಕ ವಿದ್ಯಾಭ್ಯಾಸ ಪೂರೈಸಿ ಮುಂದಿನ ಪದವಿ ಉನ್ನತ ಅಧ್ಯಯನಕ್ಕಾಗಿ ಕೇರಳದ ವಿವಿಧ ದ‌ಅವಾ ದರ್ಸ್ ಅರೆಬಿಕ್ ಕಾಲೇಜುಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗನ್ನು ಈ ಸಂದರ್ಭದಲ್ಲಿ ಬೀಳ್ಕೊಡಲಾಯಿತು. ಅವರ ಮುಂದಿನ ವಿಧ್ಯಾಭ್ಯಾಸದ ಗ್ರಂಥ ಗಳನ್ನು ದಾನಿಗಳು ಕೊಡುಗೆಯಾಗಿ ನೀಡಿದ್ದು ಅದನ್ನು ಅವರಿಗೆ ಹಸ್ತಾಂತರಿಸಲಾಯಿತು.


ಗುರುವಾಯನಕೆರೆ ಖತೀಬ್ ಎ.ಕೆ ರಝಾ ಅಮ್ಜದಿ ಸ್ವಾಗತಿಸಿದರು. ಕೊನೆಯಲ್ಲಿ ಅನ್ನದಾನ ನಡೆಯಿತು. ಗುರುವಾಯನಕೆರೆ ಮುದರ್ರಿಸ್ ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *