ಕೊಲ್ಲೂರು:(ಫೆ.21) ತೆಂಗಿನಮರದಲ್ಲಿ ಇರುವಾಗಲೇ ತೆಂಗಿನಕಾಯಿ ಕೀಳುತ್ತಿರುವಾಗ ತೆಂಗಿನಕಾಯಿ ತಲೆಗೆ ಬಿದ್ದ ಪರಿಣಾಮ ವ್ಯಕ್ತಿಯೋರ್ವರು ಆಯತಪ್ಪಿ ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆ ಕೊಲ್ಲೂರಿನ ಹೆಗ್ಗಡೆಹಕ್ಲುವಿನಲ್ಲಿ ನಡೆದಿದೆ.

ಇದನ್ನೂ ಓದಿ: Video Viral: ರಸ್ತೆ ಬದಿ ರೊಮ್ಯಾನ್ಸ್ ಮಾಡ್ತಾ ನಿಂತ ಹೈಸ್ಕೂಲ್ ಮಕ್ಳು!!
ಬೈಂದೂರಿನ ಕಾಲ್ತೋಡು ಗ್ರಾಮದ ರಾಮ ಅವರು ಆಯ ತಪ್ಪಿ ಬಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗಲೇ ಅಸುನೀಗಿದ್ದಾರೆ. ಇವರನ್ನು ಕುಂದಾಪುರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.


ಅಲ್ಲಿ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


