ಬೆಳ್ತಂಗಡಿ:(ಫೆ.22) ಕರ್ನಾಟಕ ಮಂದಿರ ಮಹಾಸಂಘವು 15 ಫೆಬ್ರವರಿ 2025 ರಂದು ಬೆಳ್ತಂಗಡಿ ಲಾಯಿಲದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನದಲ್ಲಿ 1 ದಿನದ ತಾಲೂಕು ಮಟ್ಟದ ಮಂದಿರ ಅಧಿವೇಶನವನ್ನು ಏರ್ಪಡಿಸಲಾಗಿತ್ತು.

ಈ ಅಧಿವೇಶನದಲ್ಲಿ 80 ಕ್ಕೂ ಅಧಿಕ ದೇವಸ್ಥಾನಗಳ ವಿಶ್ವಸ್ಥರು, ಅರ್ಚಕರು ಭಾಗವಹಿಸಿದ್ದರು. ದೇವಸ್ಥಾನಗಳ ರಕ್ಷಣೆ ದೃಷ್ಟಿಯಿಂದ ಅಧಿವೇಶನದಲ್ಲಿ ಕೆಲವು ಮುಖ್ಯ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

ಈ ನಿರ್ಣಯವನ್ನು ಸರಕಾರವು ಅನುಷ್ಠಾನಕ್ಕೆ ತರಬೇಕೆಂದು ಬೆಳ್ತಂಗಡಿ ತಹಶೀಲ್ದಾರರಾದ ಮಾನ್ಯ ಪೃಥ್ವಿ ಸಾನಿಕಂ ಇವರಿಗೆ ಮನವಿಯನ್ನು ನೀಡಲಾಯಿತು.


ಈ ಸಂದರ್ಭದಲ್ಲಿ ಮಂದಿರ ಮಹಾ ಸಂಘದ ತಾಲೂಕಿನ ಸಮನ್ವಯಕರು ಶ್ರೀ ಜಯಸಾಲಿಯಾನ್ ಬಲೆಂಜ, ಶ್ರೀ ಸದಾಶಿವ ಹೊಳ್ಳ ಶ್ರೀ ಗಣಪತಿ ಸುಬ್ರಮಣ್ಯ ದೇವಸ್ಥಾನ ಮಲೆಬೆಟ್ಟು. ಶ್ರೀ ವಾಮನ ಬಾಳಿಗ,ಶ್ರೀ ಮೂಜುಲ್ನಾಯ ಬ್ರಹ್ಮ ದೈವಸ್ಥಾನ ಪಡಂಗಡಿ .

ಶ್ರೀ ಸಂತೋಷ್ ಕುಮಾರ್ ಶ್ರೀ ನಾಗಂಬಿಕಾ ದೇವಸ್ಥಾನ ಮುಂಡೂರು. ಶ್ರೀ ಹರೀಶ ಮುದ್ದಿನಡ್ಕ, ಶ್ರೀ ರಾಮ ಭಜನಾ ಮಂದಿರ ಪೆರಿಯಡ್ಕ. ಹಾಗೂ ಶ್ರೀ ಯೋಗೀಶ್ ಕೆಂಬರ್ಜೆ ಇವರುಗಳು ಉಪಸ್ಥಿತರಿದ್ದರು.
