ಬಂದಾರು:(ಫೆ.24) ಸ. ಹಿ. ಪ್ರಾ. ಶಾಲೆ, ಪೆರ್ಲ -ಬೈಪಾಡಿ ಯಲ್ಲಿ ಮೆಟ್ರಿಕ್ ಮೇಳ ಆಯೋಜಿಸಲಾಗಿತ್ತು. ಸಂತೆ ಮೇಳದ ಉದ್ಘಾಟನೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ದಾಮೋದರ.ಕೆ ಇವರು ನೆರವೇರಿಸಿದರು.

ಇದನ್ನೂ ಓದಿ: ಕಕ್ಕಿಂಜೆ: ಮನ್ನಡ್ಕಪಾದೆ ಗುಡ್ಡಕ್ಕೆ ಬೆಂಕಿ
ನಾಲ್ಕರಿಂದ ಏಳನೇ ತರಗತಿ ವಿದ್ಯಾರ್ಥಿಗಳು ವ್ಯಾಪಾರ ಮಾಡಿದರು. ತರಕಾರಿ,ಹಣ್ಣು, ಫ್ಯಾನ್ಸಿ ಸ್ಟೋರ್,ಹೋಟೆಲ್, ಬೇಕರಿ ಪದಾರ್ಥಗಳು, ಆಟದ ಸ್ಟಾಲ್ ಗಳು ಇದ್ದವು.


ಕಾರ್ಯಕ್ರಮದಲ್ಲಿ ಬಂದಾರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಅನಿತಾ.ಕೆ ಇವರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಮುಖ್ಯೋಪಾಧ್ಯಾಯರಾದ ನಳಿನಿ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


