Wed. Feb 26th, 2025

Sirsi: ಶಿವರಾತ್ರಿ ಹಬ್ಬಕ್ಕೆ ಬಂದ ಗರ್ಭಿಣಿ ಮಗಳು, ಅಳಿಯ – ಮಗಳು, ಅಳಿಯನಿಗೆ ಚಾಕು ಇರಿದ ತಂದೆ – ಕಾರಣ ಕೇಳಿ ಬೆಚ್ಚಿಬಿದ್ದ ಪೋಲಿಸರು!!

ಶಿರಸಿ:(ಫೆ.26) ಶಿವರಾತ್ರಿ ಹಬ್ಬಕ್ಕೆ ಮನೆಗೆ ಬಂದಿದ್ದ ಮಗಳು, ಅಳಿಯನಿಗೆ ತಂದೆಯೋರ್ವ ಚಾಕು ಇರಿದ ಘಟನೆ ಶಿರಸಿಯ ದಾಸನಕೊಪ್ಪ ರಂಗಾಪುರದಲ್ಲಿ ನಡೆದಿದೆ. ನಂತರ ತಾನೂ ವಿಷ ಸೇವಿಸಿದ್ದಾನೆ.

ಇದನ್ನೂ ಓದಿ: Love Jihad: 3 ಮಕ್ಕಳ ತಂದೆಯಾಗಿದ್ದರೂ ಹಿಂದೂ ಯುವತಿ ಮೇಲೆ ಪ್ರೀತಿ

ಮಗಳು ಕವನ, ಅಳಿಯ ಮನೋಜ ಕಮಾಟಿ ಎಂಬುವವರ ಮೇಲೆ ತಂದೆ ಶಂಕರ ಹನುಮಂತ ಕಮ್ಮಾರ ಬದನಗೋಡು (53) ಎಂಬಾತ ಚಾಕು ಇರಿದಿದ್ದಾನೆ. ಹಾಗೂ ತಾನೂ ವಿಷ ಸೇವಿಸಿದ್ದಾನೆ.

ಕವನ ಶಿರಸಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಂದೆಯನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಅಳಿಯ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಗರ್ಭಿಣಿಯಾಗಿದ್ದ ಕವನ ಮನೆಯವರಿಗೆ ಇಷ್ಟವಿಲ್ಲದೇ ಮದುವೆಯಾಗಿದ್ದಳು ಎಂದು ವರದಿಯಾಗಿದೆ. ಸಿಪಿಐ ಶಶಿಕಾಂತ ವರ್ಮಾ ಮಾರ್ಗದರ್ಶನದಲ್ಲಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು