Fri. Feb 28th, 2025

Bantwal: ನಿಗೂಢ ರೀತಿಯಲ್ಲಿ ನಾಪತ್ತೆಯಾದ ದಿಗಂತ್ ಮನೆಗೆ ಹಿಂದೂ ಸಂಘಟನೆಯ ಪ್ರಮುಖ ಶರಣ್ ಪಂಪ್ ವೆಲ್ ಭೇಟಿ – ಪತ್ತೆ ಮಾಡಲು ಪೋಲೀಸ್ ಇಲಾಖೆಯಿಂದ ಸಾಧ್ಯವಾಗದೆ ಹೋದಲ್ಲಿ ನಾಳೆ ಫರಂಗಿಪೇಟೆ ಬಂದ್ ಗೆ ಕರೆ

ಬಂಟ್ವಾಳ:(ಫೆ.28) ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವ ಫರಂಗಿಪೇಟೆ ಕಿದೆಬೆಟ್ಟು ದಿಗಂತ್ ಮನೆಗೆ ಹಿಂದೂ ಸಂಘಟನೆಯ ಪ್ರಮುಖ ಶರಣ್ ಪಂಪ್ ವೆಲ್ ಅವರು ಭೇಟಿ ನೀಡಿದ್ದಾರೆ.

ಇದನ್ನೂ ಓದಿ: ⛔ಬೆಂಗಳೂರು: ರಾತ್ರಿ ಬೆಳಗ್ಗೆ ಎನ್ನದೇ ಸಹಕರಿಸುವಂತೆ ಪತ್ನಿಗೆ ಕಾಟ


ಫೆ. 25 ರಂದು ಮಂಗಳವಾರ ಸಂಜೆ ವೇಳೆ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಮನೆಯಿಂದ ಹೊರಟು ಹೋಗಿದ್ದ. ವಿದ್ಯಾರ್ಥಿ ದಿಗಂತ್ ಮನೆಗೆ ವಾಪಾಸು ‌ಬರದೆ ನಾಪತ್ತೆಯಾಗಿದ್ದ.


ಆದರೆ ದಿನ ಮೂರು ಕಳೆದರೂ ದಿಗಂತ್ ನ ಪತ್ತೆಯಾಗದ ಇರುವುದು ಸಾರ್ವಜನಿಕ ವಲಯದಲ್ಲಿ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ದಿಗಂತ್ ‌ನಾಪತ್ತೆಯಾದ ಘಟನೆಯ ಬಗ್ಗೆ ಪೋಲೀಸ್ ಇಲಾಖೆಗೆ ಯಾವುದೇ ಕ್ಲೂ ಈವರೆಗೆ ಸಿಗದೆ ಇರುವುದು ಕೂಡ ಪ್ರಕರಣ ಬೇರೆ ಬೇರೆ ರೂಪವನ್ನು ಪಡೆಯಬಹುದು ಎಂಬ ಆತಂಕ ಕೂಡ ವ್ಯಕ್ತವಾಗಿದೆ.


ದಿಗಂತ್ ಮನೆಗೆ ಎಸ್.ಪಿ.ಯತೀಶ್ ಎನ್ ಸಹಿತ ಉನ್ನತ ಅಧಿಕಾರಿಗಳ ಭೇಟಿ ನೀಡಿ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
‌‌‌‌‌‌ ರೈಲ್ವೆ ಹಳಿಯ ಸುಮಾರು ಕಿ.ಮೀವರೆಗೆ ಪೋಲೀಸರ ತಂಡ ಹಾಗೂ ಸಾರ್ವಜನಿಕರು ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದೀಗ ಈತನ ಪತ್ತೆಗಾಗಿ ಪ್ರತ್ಯೇಕ ‌ಮೂರು ತಂಡಗಳನ್ನು ರಚನೆ ಮಾಡಿದ್ದಾರೆ.
‌ಆದರೂ ಈವರೆಗೆ ಸಣ್ಣ ಸುಳಿವು ಕೂಡ ಇಲಾಖೆಗೆ ಲಭ್ಯವಾಗದೆ ಇರುವುದು ಆತಂಕವನ್ನು ಉಂಟುಮಾಡಿದೆ.

ನಾಳೆ ಬಂದ್ ಗೆ ಕರೆ :

ದಿಗಂತ್ ನಾಪತ್ತೆಯಾಗಿ 24 ಗಂಟೆ ಕಳೆದರೂ ಈತನ ಪತ್ತೆ ಮಾಡಲು ಸಾಧ್ಯವಾಗದ ಪೋಲಿಸ್ ಇಲಾಖೆಯ ವಿರುದ್ಧ ವಿಶ್ವಹಿಂದೂ ಪರಿಷತ್ ಫರಂಗಿಪೇಟೆ ಪ್ರಖಂಡದಿಂದ ಪೋಲೀಸ್ ಠಾಣೆಯ ಮೆಟ್ಟಿಲು ಹತ್ತಿ, ಶೀಘ್ರವಾಗಿ ಪತ್ತೆ ಮಾಡುವಂತೆ ಒತ್ತಾಯ ಮಾಡಿದ್ದಲ್ಲದೆ, ಶನಿವಾರದವರೆಗೆ ಪತ್ತೆ ಮಾಡಲು ಪೋಲೀಸ್ ಇಲಾಖೆಯಿಂದ ಸಾಧ್ಯವಾಗದ ಹೋದಲ್ಲಿ, ಶನಿವಾರ ಫರಂಗಿಪೇಟೆ ಬಂದ್ ಗೆ ಕರೆ ನೀಡುತ್ತೇವೆ. ಮತ್ತು ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ಕೂಡ ಸಂಘಟನೆ ನೀಡಿದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು