Fri. Feb 28th, 2025

Belthangady: ಬೆಳ್ತಂಗಡಿ ವಕೀಲರ ಸಂಘದಿಂದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ರವರಿಗೆ ಸನ್ಮಾನ – ನೂತನ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣಕ್ಕೆ ಮನವಿ

ಬೆಳ್ತಂಗಡಿ :(ಫೆ.೨೮) ವಕೀಲರ ಸಂಘ (ರಿ.) ಬೆಳ್ತಂಗಡಿ ವತಿಯಿಂದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ರವರಿಗೆ ಬೆಳ್ತಂಗಡಿ ವಕೀಲರ ಭವನದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ: ಮಧ್ಯಪ್ರದೇಶ: 5 ವರ್ಷದ ಕಂದಮ್ಮನ ಮೇಲೆ 17 ವರ್ಷದ ಕಾಮುಕನ ನೆರಳು

ಈ ಸಂದರ್ಭದಲ್ಲಿ ಬೆಳ್ತಂಗಡಿ ನ್ಯಾಯಾಲಯ ಸಂಕೀರ್ಣದ ಕಟ್ಟಡ ನಿರ್ಮಾಣಕ್ಕೆ ಮನವಿಯನ್ನು ಸಲ್ಲಿಸಲಾಯಿತು ಮತ್ತು ವಕೀಲರ ಭವನದ ಕಟ್ಟಡಕ್ಕೆ ಲಿಫ್ಟಿನ ವ್ಯವಸ್ಥೆಯನ್ನು ಮಾಡುವಂತೆ ಮನವಿಯನ್ನು ನೀಡಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ ವಹಿಸಿದ್ದರು. ವೇದಿಕೆಯಲ್ಲಿ ಹಿರಿಯ ಸಮಿತಿಯ ಅಧ್ಯಕ್ಷರಾದ ಅಲೋಸಿಸ್ ಎಸ್ ಲೋಬೊ, ಪ್ರಧಾನ ಕಾರ್ಯದರ್ಶಿಯಾದ ನವೀನ್ ಬಿ.ಕೆ ಮತ್ತು ಉಪಾಧ್ಯಕ್ಷರಾದ ಅಶೋಕ ಕರಿಯನೆಲ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮನವಿಯನ್ನು ಹಿರಿಯ ವಕೀಲರಾದ ಬಿ.ಕೆ. ಧನಂಜಯ ರಾವ್ ರವರು ವಾಚಿಸಿದರು. ಸನ್ಮಾನ ಪತ್ರವನ್ನು ಅಲೋಸಿಯಸ್ ಎಸ್ ಲೋಬೋ ರವರು ವಾಚಿಸಿದರು.

ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯವಾದಿ ರಕ್ಷಿತ್ ಶಿವರಾಂ, ವಕೀಲರ ಸಂಘದ ಪದಾಧಿಕಾರಿಗಳು, ಹಿರಿಯ ಕಿರಿಯ ವಕೀಲರಗಳು, ಗಣ್ಯರು ಹಾಗೂ ಪತ್ರಿಕಾ ಮಾಧ್ಯಮದವರು ಉಪಸ್ಥಿತರಿದ್ದರು.

ಕಾರ್ಯಕ್ರಮ ನಿರೂಪಣೆಯನ್ನು ವಕೀಲರಾದ ಸೇವಿಯರ್ ಪಾಲೆಲಿ ಹಾಗೂ ಧನ್ಯವಾದವನ್ನು ಅಸ್ಮ ಇವರು ನೆರವೇರಿಸಿದರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು