Fri. Apr 25th, 2025

Dharmasthala: ಶ್ರೀ ಧ.ಮಂ.ಸ್ವಾ.ಅ.ಹಿ. ಪ್ರಾ. ಶಾಲೆಯಲ್ಲಿ ಯಕ್ಷಗಾನ ತರಗತಿಯ ಸಮಾರೋಪ ಸಮಾರಂಭ

ಧರ್ಮಸ್ಥಳ:(ಮಾ.1) ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಕ್ಷಗಾನ ತರಗತಿಯ ಸಮಾರೋಪ ಸಮಾರಂಭ ಇಂದು ನಡೆಯಿತು.

ಇದನ್ನೂ ಓದಿ: 🔶ಮುಂಡಾಜೆ: ಮುಂಡಾಜೆ ಪ.ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ


ಯಕ್ಷಗಾನ ಗುರುಗಳಾದ ಶ್ರೀ ಲಕ್ಷ್ಮಣ ಗೌಡ ಇವರು ಮಕ್ಕಳನ್ನು ಕುರಿತು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ನೀವು ಯಾವುದೇ ಉದ್ಯೋಗವನ್ನು ಹೊಂದಿರಬಹುದು ಆದರೆ ನೀವು ಕಲಿತ ಈ ಯಕ್ಷಗಾನ ವಿದ್ಯೆಯನ್ನು ಮರೆಯಬೇಡಿ. ನೀವೆಲ್ಲರೂ ಸತ್ಪ್ರಜೆಯಾಗಿ ಬಾಳಿ ಬದುಕಿ ಎಂದು ಶುಭ ಹಾರೈಸಿದರು.


ಹಿರಿಯ ಶಿಕ್ಷಕರಾದ ಶ್ರೀ ಜೋಸೆಫ್ ರವರು ಮಾತನಾಡಿ ಯಕ್ಷಗಾನ ಒಂದು ವಿಶೇಷ ಕಲೆ . ಎಲ್ಲಾ ಕಲೆಗಳ ಹಿರಿಯ ಕಲೆಯಾಗಿದೆ. ವಿದ್ಯಾರ್ಥಿಗಳಾದ ನೀವು ತಂದೆ ತಾಯಿ ದೇವರನ್ನು ಪ್ರೀತಿಸಬೇಕು. ಇತರರನ್ನು ಪ್ರೀತಿಸುವ ಗುಣವನ್ನು ಹೊಂದಿರಬೇಕು ಎಂದು ಹೇಳಿದರು. ಯಕ್ಷಗಾನ ತರಗತಿಯ ಮಕ್ಕಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಶಿಕ್ಷಕರಾದ ಶ್ರೀ ಶೇಖರ್ ಗೌಡ ನಿರ್ವಹಿಸಿ, ಶ್ರೀ ಸಂಜೀವ .ಕೆ ಸ್ವಾಗತಿಸಿ, ಶ್ರೀಮತಿ ಪೂರ್ಣಿಮಾ ವಂದಿಸಿದರು.

Leave a Reply

Your email address will not be published. Required fields are marked *