ಬೆಳ್ತಂಗಡಿ:(ಮಾ.4) ಕನ್ಯಾಡಿಯ ಅಜಿಕುರಿ ನಿವಾಸಿ, ಸಿವಿಲ್ ಗುತ್ತಿಗೆದಾರ ರಾಗಿದ್ದ ದಿ. ಯಾಕೂಬ್ ಅವರ ಪುತ್ರ ಹೈದರ್ ಅಲಿ ಅವರ ಎರಡು ವರ್ಷದ ಮಗು ಮುಹಮ್ಮದ್ ಅಭಿಯಾನ್ (2) ಅವರು ಒಂದೇ ದಿನದ ಜ್ವರದಿಂದ ಬಳಲಿ ಸೌದಿ ಅರೇಬಿಯಾದ ಬುರೈದಾದಲ್ಲಿ ಮಾ.2 ರಂದು ಕೊನೆಯುಸಿರೆಳೆದಿದೆ.

ಇದನ್ನೂ ಓದಿ: ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ಮಹಿಳಾ ಅಧಿಕಾರಿ ಮೋಸ
ಹೈದರ್ ಅಲಿ ಮತ್ತು ಮಹರೂಫಾ ದಂಪತಿಯ ಎರಡು ಗಂಡು ಮತ್ತು ಒಂದು ಹೆಣ್ಣು ಮಕ್ಕಳ ಪೈಕಿ ಕೊನೆಯವನಾಗಿರುವ ಮುಹಮ್ಮದ್ ಅಭಿಯಾನ್ ಅವರಿಗೆ ಕೇವಲ ಒಂದು ದಿನದ ಮಟ್ಟಿಗೆ ಜ್ವರ ಕಾಣಿಸಿಕೊಂಡಿತ್ತು.

ತಕ್ಷಣವೇ ಮನೆಯವರು ಮಗುವಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಜ್ವರ ಉಲ್ಬಣಿಸಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆಯೇ ಮಗು ಅಸುನೀಗಿದೆ ಎಂದು ತಿಳಿದುಬಂದಿದೆ.

ಬಾಲಕನ ತಂದೆ ಹೈದರ್ ಅಲಿ ಅವರು ಬಿಲ್ಡಿಂಗ್ ಕೆಲಸ ನೋಡಿಕೊಂಡು ಸೌದಿಯಲ್ಲೇ ಇದ್ದಾರೆ.

ಮೃತ ಬಾಲಕ ತಂದೆ ತಾಯಿ ಮಾತ್ರವಲ್ಲದೇ ಅಕ್ಕ ಅಲೀನಾ ಫಾತಿಮಾ, ಅಣ್ಣ ಮುಹಮ್ಮದ್ ಅಯಾನ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

