ಕೇರಳ:(ಮಾ.4) ಕೇರಳದ ಪ್ರಸಿದ್ಧ ಮೂತ್ರಪಿಂಡಶಾಸ್ತ್ರಜ್ಞ ಮತ್ತು ಹಿರಿಯ ಶಸ್ತ್ರಚಿಕಿತ್ಸಕ ಡಾ. ಜಾರ್ಜ್ ಪಿ ಅಬ್ರಹಾಂ ಅವರು ಫಾರ್ಮ್‌ಹೌಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಇದನ್ನೂ ಓದಿ: ⛔ಪುತ್ತೂರು: ಸಾಲಗಾರರ ಕಿರುಕುಳ
ಕೊಚ್ಚಿಯ ಪ್ರಮುಖ ಖಾಸಗಿ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಹಿರಿಯ ಶಸ್ತ್ರಚಿಕಿತ್ಸಕರಾಗಿದ್ದ ಡಾ. ಅಬ್ರಹಾಂ ಭಾನುವಾರ ಸಂಜೆ ತನ್ನ ಸಹೋದರನೊಂದಿಗೆ ನೆಡುಂಬಸ್ಸೆರಿ ಸಮೀಪದ ತುರುತಿಸ್ಸೆರಿಯಲ್ಲಿರುವ ಫಾರ್ಮ್‌ಹೌಸ್‌ಗೆ ಆಗಮಿಸಿದ್ದರು.

ತದನಂತರ ತನ್ನ ಸಹೋದರನನ್ನು ಮನೆಗೆ ಬಿಟ್ಟು ಬಂದು, ತಡರಾತ್ರಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ನೇಣು ಬಿಗಿದುಕೊಂಡಿದ್ದ ಸ್ಥಳದಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದ್ದು, ಅದೇ ಪ್ರಾವೀಣ್ಯತೆಯೊಂದಿಗೆ ವೈದ್ಯಕೀಯ ವೃತ್ತಿ ಮುಂದುವರಿಸಲು ಹೆಣಗಾಡುತ್ತಿರುವುದಾಗಿ ಸೂಸೈಡ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ.


