Mon. Mar 10th, 2025

Puttur: ಮುಳಿಯ ಜ್ಯುವೆಲ್ಸ್ ನಲ್ಲಿ ಡೈಮಂಡ್ ಫೆಸ್ಟ್‌ಗೆ ಚಾಲನೆ

ಪುತ್ತೂರು:(ಮಾ.4)ಚಿನ್ನ, ವಜ್ರಾಭರಣಗಳಲ್ಲಿ ಸದಾ ಹೊಸತನವನ್ನು ಪರಿಚಯಿಸುವ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರವಾಗಿರುವ ಮುಳಿಯ ಜ್ಯುವೆಲ್ಸ್‌ನಲ್ಲಿ ಈ ವರ್ಷದ ಡೈಮಂಡ್ ಫೆಸ್ಟ್‌ಗೆ ಮಾ.3ರಂದು ಚಾಲನೆ ನೀಡಲಾಯಿತು.

ಇದನ್ನೂ ಓದಿ: 🔴Kangana Ranaut: ಕಾಪು ಮಾರಿಯಮ್ಮನ ದರ್ಶನ ಪಡೆದ ಬಾಲಿವುಡ್ ನಟಿ ಕಂಗನಾ

ಪುತ್ತೂರು ಸಾಯ ಎಂಟರ್‌ಪ್ರೈಸಸ್ ಮಳಿಗೆಯ ಮಾಲಕಿ ಸಂಧ್ಯಾ ಸಾಯರವರು ದೀಪ ಬೆಳಗಿಸಿ ಫೆಸ್ಟ್ ಉದ್ಘಾಟಿಸಿ ಮಾತನಾಡಿ, ಮುಳಿಯ ಎಂದರೆ ನಂಬಿಕೆಯ ಪ್ರತೀಕ. ಮುಳಿಯ ಸಂಸ್ಥೆ ವ್ಯವಹಾರದೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದೆ. ತಾನು ಪಡೆದದರಲ್ಲಿ ಸ್ವಲ್ಪವನ್ನು ಸಮಾಜಕ್ಕೆ ಅರ್ಪಿಸುತ್ತಿದೆ. ಇವರ ಸಾಮಾಜಿಕ ಚಿಂತನೆಗಳು ಉತ್ತಮ ಕಾರ್ಯವಾಗಿದೆ ಎಂದರು.

ಸಂಗೀತ ಶಿಕ್ಷಕಿ ಚೈತ್ರಿಕಾ ಕೋಡಿಬೈಲು ಮಾತನಾಡಿ ವಜ್ರ ಅಂದರೆ ಬಲ, ಹೊಳಪು, ಸುಂದರ ಆಭರಣಗಳು ರಾಜ್ಯದಾದ್ಯಂತ ಮನೆಮಾತಾಗಿರುವ ಬ್ರಾಂಡ್ ಆಗಿದೆ. ಮುಳಿಯ ಸಂಸ್ಥೆ ವಜ್ರದಂತೆ ಮತ್ತಷ್ಟು ಬಲಶಾಲಿಯಾಗಿ ಬೆಳೆಯಲಿ. ಈ ಫೆಸ್ಟ್ ಯಶಸ್ಸನ್ನು ತರಲಿ ಎಂದು ಹಾರೈಸಿದರು.

ಮಹಾಲಕ್ಷ್ಮಿ ಗ್ಲಾಸ್ ಮತ್ತು ಪ್ಲೈವುಡ್ಸ್‌ನ ಮಾಲಕಿ ಋತ್ವಿಕಾ ಭರತ್‌ ಮಾತನಾಡಿ, ಮುಳಿಯ ಡೈಮಂಡ್ ಫೆಸ್ಟ್ ಒಂದು ತಿಂಗಳು ನಡೆಯಲಿದೆ.ಫೆಸ್ಟ್‌ಗೆ ಉತ್ತಮ ಸ್ಪಂದನೆ ಸಿಗಲಿ, ಗ್ರಾಹಕರು ಯಶಸ್ವಿಗೊಳಿಸಲಿ ಎಂದು ಹಾರೈಸಿದರು.

ಆಡಳಿತ ನಿರ್ದೇಶಕಿ ಅಶ್ವಿನಿಕೃಷ್ಣ ಮುಳಿಯ ಮಾತನಾಡಿ, ವಜ್ರಾಭರಣಗಳ ಉತ್ಸವ ಆಯೋಜನೆ ಮಾಡಿದ್ದೇವೆ. ಮಹಿಳೆಯರು ಇಷ್ಟಪಡುವ ಪರಂಪರಾಗತವಾದ ವಜ್ರಾಭರಣಗಳ ಸಂಗ್ರಹ ಇದೆ. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಹಲವು ವೈಶಿಷ್ಟ್ಯಗಳ ಆಭರಣ ಒದಗಿಸುತ್ತಿದ್ದೇವೆ. ರೂ. 9000 ದಿಂದ 15000 ದವರೆಗಿನ ವಜ್ರಾಭರಣಗಳಿವೆ. ಗ್ರಾಹಕರು ಇದನ್ನು ಯಶಸ್ಸುಗೊಳಿಸಿ ಎಂದರು.


ಆಡಳಿತ ನಿರ್ದೇಶಕಿ ಕೃಷ್ಣವೇಣಿ ಮುಳಿಯ ಮಾತನಾಡಿ ಬಂಗಾರ ಜೀವನದ ಆಧಾರ, ವಜ್ರವೂ ಜೀವನಕ್ಕೆ ಆತ್ಮವಿಶ್ವಾಸ ತುಂಬಿ ಭದ್ರತೆ ತರುತ್ತದೆ. ವಜ್ರ ಅಂದರೆ ಪ್ರಬಲತೆ ಹೊಂದಿರುತ್ತದೆ. ಆಭರಣ ಪ್ರಿಯರು ವಿಶೇಷತೆ ಪರಿಶೀಲಿಸಿ ಧರಿಸಿದಾಗ ಆಭರಣ ದೀರ್ಘಬಾಳ್ವಿಕೆ ಬರುತ್ತದೆ. ಗ್ರಾಹಕರಿಗಾಗಿ ಆಯೋಜನೆ ಮಾಡಿದ ಈ ಹಬ್ಬವನ್ನು ಗ್ರಾಹಕರು ಪ್ರೀತಿಸಿ ಯಶಸ್ವಿಗೊಳಿಸಿ ಎಂದರು.

ಶೋರೂಮ್ ಮ್ಯಾನೇಜರ್ ರಾಘವೇಂದ್ರ ಪಾಟೀಲ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿ ರಾಜೇಶ್ ಸ್ವಾಗತಿಸಿ ಪ್ರಭಾಕರ ಭಟ್ ವಂದಿಸಿದರು. ಪ್ಲೋರ್ ಮ್ಯಾನೇಜ‌ರ್ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *