ಮಂಡ್ಯ (ಮಾ.5): ಮೂರು ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದ ಯುವಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ.

ಪುರಸಭೆ ಸದಸ್ಯ ಕೆ.ಸಿ.ಮಂಜುನಾಥ್ ಪುತ್ರ ಶಶಾಂಕ್ (28) ಸಾವು ಮೃತ ದುರ್ದೈವಿ. ಶಶಾಂಕ್ ಖಾಸಗಿ ಕಂಪನಿಯಲ್ಲಿ ಐಟಿ ಉದ್ಯೋಗಿಯಾಗಿದ್ದನು. ಜಾರ್ಖಂಡ್ ಮೂಲದ ಯುವತಿ ಅಷ್ಣಾರನ್ನು ಪ್ರೀತಿಸಿದ್ದರು. ಕಳೆದ ಭಾನುವಾರ ಮೈಸೂರಿನ ರೆಸಾರ್ಟ್ ಒಂದರಲ್ಲಿ ಮದುವೆ ನೆರವೇರಿತ್ತು.

ಶಶಾಂಕ್ ಮದುವೆ ದಿನವೂ ಸ್ವಲ್ಪ ಜ್ವರದಿಂದ ಬಳಲುತ್ತಿದ್ದರು. ಈ ಬಗ್ಗೆ ಶಶಾಂಕ್ ತನ್ನ ಸ್ನೇಹಿತರ ಮುಂದೆ ಹೇಳಿಕೊಂಡಿದ್ದನು. ಮಾ.04 ರಂದು ಬೆಂಗಳೂರಿನ ನಿವಾಸದಲ್ಲಿ ಶಶಾಂಕ್ಗೆ ಎದೆ ನೋವು ಎದೆನೋವು ಕಾಣಿಸಿಕೊಂಡಿದೆ.

ಪೋಷಕರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಶಶಾಂಕ್ ಅಷ್ಟೊತ್ತಿಗಾಗಲೇ ಮೃತಪಟ್ಟಿದ್ದರು.


