Mon. Mar 10th, 2025

Puttur: ಸುಳ್ಯದ ಡೆಂಟಲ್ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್ – ಪುತ್ತೂರಿನ ಯುವಕ ನಾಪತ್ತೆ

ಪುತ್ತೂರು:(ಮಾ.6) ಯುವತಿಯೋರ್ವಳು ವಸತಿ ಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದಲ್ಲಿ ನಡೆದಿದೆ.

ಇದನ್ನೂ ಓದಿ: ಬೆಳ್ತಂಗಡಿ: 800 ವರ್ಷಗಳ ಇತಿಹಾಸ ಹೊಂದಿರುವ  ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೇಳ – ಕಾಶಿಪಟ್ಣದಲ್ಲಿ

ಯುವತಿ ಸುಳ್ಯದ ಡೆಂಟಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ಬೆಳಗಾವಿ ಜಿಲ್ಲೆಯ ತೆಲಸಂಗ ಗ್ರಾಮದ ಕೃತಿಕಾ ಸಿದ್ದಣ್ಣ ನಿಡೋಣಿ ಆತ್ಮಹತ್ಯೆ ಮಾಡಿಕೊಂಡ ಯುವತಿ.
ಮೃತರ ತಂದೆ ನೀಡಿದ ದೂರಿನ ಮೇರೆಗೆ ಪುತ್ತೂರಿನ ನವೀನ್ ಮತ್ತು ವಸತಿ ಗೃಹದ ಮೇಲ್ವಿಚಾರಕಿ ತಾರ ಕುಮಾರಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

ಮೃತ ಯುವತಿಗೆ ಪುತ್ತೂರಿನ ನವೀನ್ ಎಂಬಾತ ಪದೇ ಪದೇ ಕರೆ ಮಾಡಿ ತೊಂದರೆ ನೀಡಿ ಫೋಟೋ ವಿಡಿಯೋಗಳನ್ನು ತಂದೆಗೆ ಕಳಿಹಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.


ಈ ಎಲ್ಲಾ ವಿಚಾರಗಳನ್ನು ವಸತಿ ಗೃಹದ ಮೇಲ್ವಿಚಾರಕಿ ತಾರಾ ಗಮನಿಸದೆ ಪಾಲಕರ ಗಮನಕ್ಕೆ ತರದೆ ಕರ್ತವ್ಯ ಲೋಪವೆಸಗಿದ್ದಾರೆ ಮತ್ತು ಯುವತಿಯ ಆತ್ಮಹತ್ಯೆಗೆ ಕಾರಣವಾದ ನವೀನ್ ವಿರುದ್ಧ ದೂರು ನೀಡಿದ್ದು, ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂ. 28/2025 ಕಲಂ 108 BNS Act ನಂತೆ ಪ್ರಕರಣ ದಾಖಲಾಗಿದೆ.
ಸದ್ಯ ಪುತ್ತೂರಿನ ನವೀನ್ ಎಂಬಾತ ಪರಾರಿಯಾಗಿದ್ದು , ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *