ಬಂದಾರು: (ಮಾ.8) ಬಂದಾರು ಗ್ರಾಮದ ಮೈರೋಳ್ತಡ್ಕ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ 8 ನೇ ತರಗತಿ ವಿದ್ಯಾರ್ಥಿನಿ ಕುರಾಯ ನಿವಾಸಿ ರಾಮಣ್ಣ ಗೌಡ ಮತ್ತು ಪುಷ್ಪಾವತಿ ಕೆ ದಂಪತಿಗಳ ಪುತ್ರಿ ಕು. ಮನ್ವಿ ಕೆ. ಆರ್ ಇವರು ಸಮಗ್ರ ಶಿಕ್ಷಣ ಇಲಾಖೆ,

ಇದನ್ನೂ ಓದಿ: 🛑ಉಡುಪಿ: ಚಲಿಸುತ್ತಿದ್ದ ಖಾಸಗಿ ಬಸ್ ನ ಸ್ಟೇರಿಂಗ್ ಕಟ್
ನಾಲೆಡ್ಜ್ ಆಫ್ ಇಂಡಿಯಾ ಕ್ವಿಜ್ ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ ಕರ್ನಾಟಕ ಸರ್ಕಾರಿ ಶಾಲೆಗಳಿಗೆ ವಿಶೇಷ ರಸಪ್ರಶ್ನೆ 2024-25 ಕ್ವಿಜ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.




ಶಾಲಾಭಿವೃದ್ಧಿ ಸಮಿತಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ಪೋಷಕ ವೃಂದ, ವಿದ್ಯಾಭಿಮಾನಿಗಳು ಅಭಿನಂದನೆ ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
