Mon. Mar 10th, 2025

Ujire: ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NMAMIT) ಯ “Best Outgoing” ಸ್ಟೂಡೆಂಟ್ ಆಗಿ ಉಜಿರೆಯ ಮಹಮ್ಮದ್ ಹಾಫಿಲ್ ಆಯ್ಕೆ

ಉಜಿರೆ:(ಮಾ.8) ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇದರ ಅಂತಿಮ ವರ್ಷದ ವಿದ್ಯಾರ್ಥಿ ಉಜಿರೆಯ ಮಹಮ್ಮದ್ ಹಾಫಿಲ್ ಅವರು ಎಲ್ಲಾ ರಂಗಗಳಲ್ಲಿ ತನ್ನ ಅದ್ವಿತೀಯ ಸಾಧನೆಗಾಗಿ , ಕಾಲೇಜಿನ ಎಲ್ಲಾ ವಿಭಾಗಗಳಲ್ಲೂ “ಬೆಸ್ಟ್ ಅವ್ಟ್ ಗೋಯಿಂಗ್” ಸ್ಟೂಡೆಂಟ್ ಆಗಿ ಹೊರ ಹೊಮ್ಮಿದ್ದು,

ಇದನ್ನೂ ಓದಿ: 💠ಬಂದಾರು : ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ ರಸಪ್ರಶ್ನೆ 2024-25 ಕ್ವಿಜ್ ಸ್ಪರ್ಧೆಯಲ್ಲಿ

ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ. ಅವರು ಕಲಿಕೆಯಲ್ಲಿ, ಕ್ರೀಡಾ ವಿಭಾಗ ಹಾಗೂ ಸಾಂಸ್ಕೃತಿಕ ವಿಭಾಗ ಹೀಗೆ ಎಲ್ಲ ರಂಗಗಳಲ್ಲೂ ಮಿಂಚಿ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ: 🛑ಉಡುಪಿ: ಚಲಿಸುತ್ತಿದ್ದ ಖಾಸಗಿ ಬಸ್ ನ ಸ್ಟೇರಿಂಗ್ ಕಟ್

ಅಷ್ಟು ಮಾತ್ರವಲ್ಲದೆ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲೂ ಉತ್ತಮ ಸಾಧನೆ ಮಾಡಿ ಅಲ್ಲೂ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಇವರು ಉಜಿರೆಯ ಉದ್ಯಮಿ ರೊಟೇರಿಯನ್ ಅಬೂಬಕ್ಕರ್ ಹಾಗೂ ರೇಶ್ಮಾ ದಂಪತಿಗಳ ಪುತ್ರರಾಗಿದ್ದಾರೆ.

Leave a Reply

Your email address will not be published. Required fields are marked *