ಬೆಂಗಳೂರು (ಮಾ.8): ಯುವಕ, ಯುವತಿಯರು ಹುಚ್ಚಾಟವಾಡಿದ್ದಾರೆ. ರಸ್ತೆಯಲ್ಲಿ ಯುವಕ, ಯುವತಿಯರ ಹುಚ್ಚಾಟದಿಂದ ವಾಹನ ಸವಾರರು ಪರದಾಡಿದ್ದಾರೆ.

ಇದನ್ನೂ ಓದಿ: ⭕ಜೈಪುರ: ಕಣ ಕಣದಲ್ಲಿ ಕೇಸರಿ ಎಂದ ಮೂವರು ಬಾಲಿವುಡ್ ಸ್ಟಾರ್ ನಟರಿಗೆ ನೋಟಿಸ್
ಒಂದೇ ಬೈಕ್ ನಲ್ಲಿ ಇಬ್ಬರು ಯುವಕರು ಮತ್ತು ಓರ್ವ ಯುವತಿ ಹೆಲ್ಮೆಟ್ ಹಾಕದೆ, ತ್ರಿಬಲ್ ರೈಡಿಂಗ್ ಹೋಗಿದ್ದಾರೆ. ಅಲ್ಲದೇ ಬೈಕ್ನಲ್ಲಿ ಹೋಗುತ್ತಲೇ ಯುವತಿ ಯುವಕನಿಗೆ ಕಿಸ್ ಕೊಟ್ಟಿದ್ದಾಳೆ.


ಪ್ರಶ್ನಿಸಿದ ಇತರೆ ಬೈಕ್ ಸವಾರರಿಗೆ ಧಮ್ಕಿ ಹಾಕಿದ್ದಾರೆ. ಮಾರ್ಚ್ 7 ರಂದು ರಾತ್ರಿ ರಾಗಿಗುಡ್ಡ ರಸ್ತೆಯಲ್ಲಿ ಘಟನೆ ನಡೆದಿದೆ. ಓರ್ವ ಯುವಕ ಬೈಕ್ ಚಾಲನೆ ಮಾಡುತ್ತಿದ್ದನು.

ಸವಾರನ ಹಿಂದೆ ಕುಳಿತಿದ್ದ ಯುವಕನಿಗೆ ಯುವತಿ ಮುತ್ತುಕೊಟ್ಟಿದ್ದಾಳೆ. ಯುವಕ ಯುವತಿಯರ ಹುಚ್ಚಾಟವನ್ನು ಬೈಕ್ ಸವಾರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ.
ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾನೆ. ಜೆಪಿ ನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

