Pavithra Gowda:(ಮಾ.8) ಕನ್ನಡ ಚಿತ್ರರಂಗದ ನಟಿ, ಹಾಗೂ ಮಾಡೆಲ್ ಆಗಿರುವ ಪವಿತ್ರಾ ಗೌಡ ವಿಶ್ವ ಮಹಿಳಾ ದಿನದಂದು ಹೆಣ್ಣು ಮಕ್ಕಳಿಗೆ ವಿಶೇಷ ಮೆಸೇಜ್ ನೀಡುವ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ.

ಇದನ್ನೂ ಓದಿ: ⭕ಬೆಂಗಳೂರು: ಯುವಕರಿಬ್ಬರ ಜತೆ ಬೈಕ್ ನಲ್ಲಿ ಯುವತಿ ತ್ರಿಬಲ್ ರೈಡಿಂಗ್
ಪವಿತ್ರಾ ಗೌಡ ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋ ರೀ-ಓಪನ್ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದರು. ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜೊತೆ ಜೈಲು ಸೇರಿದ್ದ ನಟಿ,



ಬಿಡುಗಡೆಯಾದ ಮೇಲೆ ಹೆಚ್ಚಾಗಿ ದೇವಸ್ಥಾನ ದರ್ಶನ, ಪೂಜೆ, ಪುನಸ್ಕಾರಗಳನ್ನು ಮಾಡೋದ್ರಲ್ಲಿ ಬ್ಯುಸಿಯಾಗಿದ್ದರು. ನಂತರ ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋ ರೀ ಓಪನ್ ಕೂಡ ಮಾಡಿಸಿದ್ದರು.

ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಡಿಸೈನರ್ ವೇರ್ ಗಳ ಫೋಟೋ ಶೂಟ್, ವಿಡಿಯೋಗಳನ್ನು ಅಪ್ ಲೋಡ್ ಮಾಡುವ ಮೂಲಕ ತಾವು ಸಂಪೂರ್ಣವಾಗಿ ಕಂ ಬ್ಯಾಕ್ ಮಾಡಿದ್ದೇನೆ ಅನ್ನೋದನ್ನು ತೋರಿಸಿದ್ದಾರೆ.
