Mon. Mar 10th, 2025

Bantwal: ಫರಂಗಿಪೇಟೆಯ ಕಾಲೇಜು ವಿದ್ಯಾರ್ಥಿ ದಿಗಂತ್ ಪತ್ತೆ ವಿಚಾರ – ದಿಗಂತ್ ಪತ್ತೆ ಹಿಂದಿತ್ತು ದೈವ ಪವಾಡ…?

ಮಂಗಳೂರು:(ಮಾ.10) ಬಂಟ್ವಾಳದ ಫರಂಗಿಪೇಟೆಯ ಕಾಲೇಜು ವಿದ್ಯಾರ್ಥಿ ದಿಗಂತ್ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಒಂದು ವಿಚಾರ ಬೆಳಕಿಗೆ ಬಂದಿದೆ. ದಿಗಂತ್ ಪತ್ತೆಯ ಹಿಂದೆ ದೈವದ ಪವಾಡವಿತ್ತು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: 🔥ಪುಂಜಾಲಕಟ್ಟೆ: ತೆಂಗಿನೆಣ್ಣೆ ಮಿಲ್ ಅಗ್ನಿಗಾಹುತಿ

ದಿಗಂತ್ ಕುಟುಂಬದ ಭಕ್ತಿಗೆ ತುಳುನಾಡಿನ ಕಾರಣಿಕದ ದೈವ ಒಲಿದಿತ್ತು. ದಿಗಂತ್ ಸಹೋದರ ಅರ್ಕುಳ ಉಳ್ಳಾಕುಲು ಮಗೃಂತಾಯ ದೈವ ನೇಮೋತ್ಸವ ಸಂದರ್ಭದಲ್ಲಿ ಮನಸ್ಸಲ್ಲೇ ಸಂಕಲ್ಪ ಮಾಡಿದ್ದರು, ದೈವದ ನೇಮೋತ್ಸವದ ಧ್ವಜ ಕೆಳಗೆ ಇಳಿಯುವುದರ ಒಳಗಾಗಿ ನನ್ನ ತಮ್ಮ ಪತ್ತೆ ಆಗಬೇಕು ಎನ್ನುವ ಸಂಕಲ್ಪ ಮಾಡಿದ್ದರು.

ದಿಗಂತ್ ಸಹೋದರ ದೈವಸ್ಥಾನದಲ್ಲಿ ದೀವಟಿಗೆ ಹಿಡಿಯುವ ಕೆಲಸ ಮಾಡಿಕೊಂಡಿದ್ದರು. ನಾಲ್ಕು ತಲೆಮಾರುಗಳಿಂದಲೂ ದಿಗಂತ್ ಕುಟುಂಬದ ದೈವ ಚಾಕರಿ ಮಾಡುತ್ತಾ ಬಂದಿತ್ತು. ಆದ್ರೆ ಸಹೋದರ ರವಿ ದೈವದಲ್ಲಿ ಪ್ರಶ್ನೆ ಕೇಳುವುದಿಲ್ಲ, ನಮ್ಮ ಸೇವೆಗೆ ದೈವ ದಿಗಂತ್ ಪತ್ತೆ ಮಾಡಬೇಕು, ಎಂದು ಮನಸ್ಸಲ್ಲೇ ಬೇಡಿಕೊಂಡಿದ್ದರು.


ದೈವದ ನೇಮೋತ್ಸವದ ಧ್ವಜಾವರೋಹಣ ನಡೆದಿತ್ತು, ಸಂಜೆಯೇ ದಿಗಂತ್ ಪತ್ತೆಯಾಗಿದ್ದ. ದೈವ ನಮ್ಮ ಕುಟುಂಬದ ಚಾಕರಿಗೆ ಫಲ ನೀಡಿದೆ. ದಿಗಂತ್‌ನನ್ನು ಉಳ್ಳಾಕುಲು ಮಗೃಂತಾಯ ದೈವವೆ ಪತ್ತೆ ಹಚ್ಚಿದ ಎಂದು ದಿಗಂತ್ ಸಹೋದರ ರವಿ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *