Mon. Mar 10th, 2025

Mumbai: ಆಂಟಿ ಜೊತೆ ಫಸ್ಟ್ ಪಿಯುಸಿ ವಿದ್ಯಾರ್ಥಿಯ ಲವ್‌ – 3 ಮಕ್ಕಳ ತಾಯಿಯೊಂದಿಗೆ ವಿದ್ಯಾರ್ಥಿ ಎಸ್ಕೇಪ್!!

ಮುಂಬೈ:(ಮಾ.10) 3 ಮಕ್ಕಳ ತಾಯಿಯೊಂದಿಗೆ ಫಸ್ಟ್ ಪಿಯುಸಿ ವಿದ್ಯಾರ್ಥಿಯೊಬ್ಬ ಓಡಿ ಹೋಗಿರುವ ಘಟನೆ ಮಹಾರಾಷ್ಟ್ರದ ನಾಗುರದಲ್ಲಿ ನಡೆದಿದೆ.

ಇದನ್ನೂ ಓದಿ: 🟣ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಮಹಿಳಾಮೋರ್ಚಾದ ವತಿಯಿಂದ “ವಿಶ್ವ ಮಹಿಳಾ ದಿನಾಚರಣೆ”

3 ಮಕ್ಕಳ ತಾಯಿ ಆದ ಮಹಿಳೆ ಹಾಗೂ ಪಿಯುಸಿ ವಿದ್ಯಾರ್ಥಿ ಈ ಇಬ್ಬರು ಅಕ್ಕ- ಪಕ್ಕದ ಮನೆಯಲ್ಲಿ ವಾಸವಿರುತ್ತಾರೆ. ಒಮ್ಮೆ ವಿದ್ಯಾರ್ಥಿಯ ತಂದೆ ಆ ಮಹಿಳೆ ಜೊತೆ ಮಗಳ ಆರೋಗ್ಯದ ವಿಚಾರವಾಗಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಮಹಿಳೆ ಜೊತೆ ವಿದ್ಯಾರ್ಥಿಯ ಪರಿಚಯ ಆಗಿದೆ. ಇದೇ ಪರಿಚಯ ಗಾಢವಾಗಿ ಇಬ್ಬರ ನಡುವಿನ ಸಂಪರ್ಕ ಮತ್ತಷ್ಟು ಬಲಗೊಂಡಿತ್ತು ಎಂದು ಹೇಳಲಾಗಿದೆ.


ಮಹಿಳೆ ಜೊತೆ ವಿದ್ಯಾರ್ಥಿ ಸಲುಗೆಯಿಂದ ಇರುವುದನ್ನು ನೋಡಿದ್ದ ತಂದೆ, ಆಕೆಯ ಜೊತೆ ಹಾಗೆಲ್ಲ ಇರಬಾರದು. ನಿನಗಿಂತ ಮಹಿಳೆ ದೊಡ್ಡವರು. 3 ಮಕ್ಕಳ ತಾಯಿ ಎಂದು ಬುದ್ಧಿವಾದ ಹೇಳಿದ್ದರು. ಆದರೆ ಇಬ್ಬರ ನಡುವಿನ ಸಂಬಂಧ ಹೆಚ್ಚುತ್ತ ಹೋಗಿದ್ದರಿಂದ ತಂದೆ, ತನ್ನ ಮಗನನ್ನು ಹಳೆ ಮಂಗಳವಾಡಿಯಲ್ಲಿನ ತಮ್ಮ ಸಂಬಂಧಿಕರ ಮನೆಗೆ ಕಳುಹಿಸಿದ್ದರು ಎಂದು ತಿಳಿದು ಬಂದಿದೆ.

ಇಷ್ಟೆಲ್ಲಾ ಮಾಡಿದರೂ ಮಹಿಳೆ ಜೊತೆ ಓಡಿ ಹೋಗಲು ವಿದ್ಯಾರ್ಥಿ ಪ್ಲಾನ್ ಮಾಡಿದ್ದ. ಅದರಂತೆ ಮಹಿಳೆ ಜೊತೆ ಓಡಿ ಹೋಗಿದ್ದ. ಈ ಸಂಬಂಧ ವಿದ್ಯಾರ್ಥಿ ತಂದೆ, ಪೋಲಿಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲು ಮಾಡಿದ್ದರು. ಇದಕ್ಕೆ ಪ್ರತಿ ದೂರು ದಾಖಲು ಮಾಡಿದ್ದ ಮಹಿಳೆ ಕಡೆಯವರು ನಾಪತ್ತೆ ಪ್ರಕರಣ ದಾಖಲಿಸಿದ್ದರು ಎಂದು ಹೇಳಲಾಗಿದೆ.

ಹೀಗಾಗಿ ಈ ಕೇಸ್ ಅನ್ನು ಮಾನವ ಕಳ್ಳಸಾಗಣೆ ವಿರೋಧಿ ಘಟಕಕ್ಕೆ ವರ್ಗಾಯಿಸಲಾಗಿತ್ತು. ಶೋಧಕಾರ್ಯ ಕೈಗೊಂಡಿದ್ದ ಅಧಿಕಾರಿಗಳು ಇಬ್ಬರನ್ನು ಹಿಡಿದು ತಂದು ಬುದ್ದಿ ಮಾತು ಹೇಳಿದ್ದಾರೆ. ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು ಕೋರ್ಟ್‌ಗೆ ಹಾಜರು ಪಡಿಸಿದ್ದರು. ನ್ಯಾಯಾಲಯ ವಿಚಾರಣೆ ಮಾಡಿ ಮಹಿಳೆಗೆ ಜಾಮೀನು ನೀಡಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *