Wed. Mar 12th, 2025

Udupi: ಅಜೆಕಾರು ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣ – ಪ್ರತಿಮಾ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಆಕ್ಷೇಪ

ಉಡುಪಿ:(ಮಾ.11) ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿ ಪ್ರೀತಿಯಾಗಿದ್ದ ಯುವಕನಿಗಾಗಿ ಮಹಿಳೆಯೊಬ್ಬಳು ಗಂಡನ ಜೀವವನ್ನೇ ತೆಗೆದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.

ಇದನ್ನೂ ಓದಿ: ❌Forest Department: ಪುಣ್ಯ ಕ್ಷೇತ್ರಗಳ ನದಿ ತೀರದಲ್ಲಿ ಶ್ಯಾಂಪೂ, ಸೋಪುಗಳ ಮಾರಾಟ ನಿಷೇಧ

ಇದೀಗ ಅಜೆಕಾರಿನ ದೆಪ್ಪುತ್ತೆಯ ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣ ಸಂಬಂಧಪಟ್ಟಂತೆ ಅವರ ಪತ್ನಿ ಪ್ರತಿಮಾಗೆ ಜಾಮೀನು ನೀಡುವುದಕ್ಕೆ ಸರಕಾರಿ ಅಭಿಯೋಜಕರು ಸೋಮವಾರ ಆಕ್ಷೇಪಣೆ ಸಲ್ಲಿಸಿದ್ದು, ಪ್ರಕರಣದ ವಿಚಾರಣೆಯು ಮಾ. 11ರಂದು ಕಾರ್ಕಳದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ನ್ಯಾಯಾಲಯದ ಸಂಚಾರಿ ಪೀಠದಲ್ಲಿ ನಡೆಯಲಿದೆ.


ಸರಕಾರಿ ಅಭಿಯೋಜಕ ಬೇಳೂರು ಪ್ರಕಾಶ್‌ ಚಂದ್ರ ಶೆಟ್ಟಿ ಅವರು ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಪ್ರತಿಮಾ ಸಲ್ಲಿಸಿದ್ದ ಜಾಮೀನು ಅರ್ಜಿಗೆ ಆಕ್ಷೇಪ ಸಲ್ಲಿಸಿದ್ದರು.

ಜಾಮೀನು ಕುರಿತಂತೆ ವಿಚಾರಣೆ ನಡೆದ ಬಳಿಕ ಜಾಮೀನು ನೀಡಬೇಕೋ? ಅಥವಾ ಬೇಡವೋ ಅನ್ನುವುದನ್ನು ನ್ಯಾಯಾಧೀಶರು ನಿರ್ಧರಿಸಲಿದ್ದಾರೆ. ಇನ್ನು ಈ ಮೊದಲು ಪ್ರಕರಣದ ಮತ್ತೋರ್ವ ಆರೋಪಿ ದಿಲೀಪ್ ಹೆಗ್ಡೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.

Leave a Reply

Your email address will not be published. Required fields are marked *