Fri. Mar 14th, 2025

Mangaluru: ತುಳು ಚಿತ್ರರಂಗದಲ್ಲಿ ಮಿಂಚಿದ್ದ ಕಲಾವಿದ ವಿವೇಕ್‌ ಮಾಡೂರು ಹೃದಯಾಘಾತಕ್ಕೆ ಬಲಿ!

ಮಂಗಳೂರು:(ಮಾ.14) ತುಳು ಚಿತ್ರರಂಗದಲ್ಲಿ ತನ್ನ ನಟನೆಯ ಮೂಲಕ, ಕುಬ್ಜ ದೇಹದಿಂದಲೇ ಕಲಾ ರಸಿಕರನ್ನು ರಂಜನೆ ಮಾಡುತ್ತಿದ್ದ ಪ್ರಚಂಡ ಕುಳ್ಳ ಖ್ಯಾತಿಯ ವಿವೇಕ್‌ ಮಾಡೂರು (52) ಇಂದು ಬೆಳಗ್ಗೆ ಹೃದಯಾಘಾತದಿಂದ ಮಾಡೂರಿನ ಸ್ವಗೃಹದಲ್ಲಿ ನಿಧನರಾಗಿರುವ ವರದಿಯಾಗಿದೆ.

ಇದನ್ನೂ ಓದಿ: 🛑ಬೆಳ್ತಂಗಡಿ: ಮನೆಯಿಂದ ಪೇಟೆಗೆಂದು ಹೋದ ವ್ಯಕ್ತಿ ಬಸ್‌ ಸ್ಟ್ಯಾಂಡ್‌ ನಲ್ಲಿ ಶವವಾಗಿ ಪತ್ತೆ

ನಿನ್ನೆ ರಾತ್ರಿ ತಮ್ಮ ಮನೆಯ ಶೌಚಾಲಯದಲ್ಲಿ ಏಕಾ ಏಕಿ ಬಿದ್ದಿದ್ದ ವಿವೇಕ್‌ ಅವರು ನಂತರ ನಿದ್ದೆಗೆ ಜಾರಿ ವಿಶ್ರಾಂತಿ ಪಡೆದಿದ್ದಾರೆ. ಬೆಳಗ್ಗೆ ಮನೆ ಮಂದಿ ಎಬ್ಬಿಸಲು ಹೋದಾಗ ಮೃತ ಹೊಂದಿರುವುದು ತಿಳಿದು ಬಂದಿದೆ.

ಟೆಲಿಫೋನ್‌ ಎಸ್‌ಟಿಡಿ ಬೂತ್‌ ನಡೆಸುತ್ತಿದ್ದ ವಿವೇಕ್‌ ಅವರು ಬೂತ್‌ ಮುಚ್ಚಿದ ನಂತರ ಅಣ್ಣನ ದಿನಸಿ ಅಂಗಡಿಯಲ್ಲಿ ಪ್ಲಾಸ್ಟಿಕ್‌ ಮನೆ ಬಳಕೆಯ ಸಾಮಾಗ್ರಿಗಳನ್ನು ಮಾರಾಟ ಮಾಡುತ್ತಿದ್ದರು. ವೃತ್ತಿಪರ ಹಾಸ್ಯ ಕಲಾವಿದರಾಗಿದ್ದ ವಿವೇಕ್‌ ಅವರು ಕರಾವಳಿಯ ಹೆಸರಾಂತ ನಾಟಕ ತಂಡಗಳಲ್ಲಿ ಅಭಿನಯ ಮಾಡಿದ್ದಾರೆ.

Leave a Reply

Your email address will not be published. Required fields are marked *