Sat. Mar 15th, 2025

Anupama Gowda: ಆತ ಎಲ್ಲೆಂದರಲ್ಲಿ ಟಚ್‌ ಮಾಡಿದ್ದ, ಆ ವ್ಯಕ್ತಿಯನ್ನು ಎಂದಿಗೂ ನಾನು ಕ್ಷಮಿಸುವುದಿಲ್ಲ! – ಅನುಪಮಾ ಗೌಡ

Anupama Gowda:(ಮಾ.15) ಸ್ಯಾಂಡಲ್‌ವುಡ್‌ನ ನಟಿ ನಿರೂಪಕಿ ಅನುಪಮಾ ಗೌಡ, ಅಕ್ಕ ಧಾರಾವಾಹಿ ಮೂಲಕ ಮಿಂಚಿದ್ದರು. ಇದೀಗ ನಿರೂಪಣೆಯಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: ⭕Mangaluru : ಅಪಾರ್ಟ್‌ಮೆಂಟ್ ಮೇಲಿಂದ ಬಿದ್ದು ಬಾಲಕ ಸಾವು!!

ಡಾಗ್ ಲವರ್:
ಅವರಿಗೆ ನಾಯಿಗಳನ್ನು ಸಾಕುವುದು ತುಂಬಾ ಇಷ್ಟ. ಮನೆಯಲ್ಲಿ 3 ರಿಂದ ನಾಲ್ಕು ನಾಯಿಗಳನ್ನು ಸಾಕುತ್ತಿದ್ದಾರೆ. ‘ಲಂಕೇಶ್ ಪತ್ರಿಕೆ’ ಚಿತ್ರದಲ್ಲಿ ಅನುಪಮಾ ಗೌಡ ಬಾಲನಟಿಯಾಗಿ ಮಿಂಚಿದ್ದರು. ತಂದೆ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಹಾಗಾಗಿ ಬಣ್ಣದಲೋಕದ ನಂಟು ಬೆಳೆಯಲು ಸುಲಭವಾಯಿತು.

ಇದೀಗ ಅನುಪಮಾ ಗೌಡ ಅವರು ಬಾಲ್ಯದಲ್ಲಿ ದೌರ್ಜನ್ಯಕ್ಕೆ ಒಳಗಾಗಿರೋ ಬಗ್ಗೆ ಸಂದರ್ಶನವೊಂದರಲ್ಲಿ ರಿವೀಲ್‌ ಮಾಡಿದ್ದಾರೆ. ಲಂಕೇಶ್‌ ಪತ್ರಿಕೆ ಮೂಲಕ ನಾನು ಸಿನಿಮಾಗೆ ಎಂಟ್ರಿ ಕೊಟ್ಟೆ. ಆಗ ನನಗೆ ದುಡ್ಡು ಬರುತ್ತೆ ಅಂತ ಖುಷಿ. ಆದರೆ ಬಳಿಕ ಒಮ್ಮೆ ಒಂದು ದಿನ ಏನಾಯ್ತು ಅಂದರೆ, ಆಗ ನನಗೆ ಇನ್ನೂ ಸಣ್ಣ ವಯಸ್ಸು. ಆ ವ್ಯಕ್ತಿ ಈಗ ಇಂಡಸ್ಟ್ರಿಯಲ್ಲಿ ಇದ್ದಾರೋ ಇಲ್ವೋ ಗೊತ್ತಿಲ್ಲ. ನನ್ನ ಅಕ್ಕ ಮಾಡುವಾಗ, ಆಗ ಆರ್ಟಿಸ್ಟ್‌ ಅವರು. ಆಗ ಮನೆಗೆಲ್ಲ ಬರೋರು. ನಂತ್ರ ನನ್ನ ಟೆರೇಸ್‌‌‌ ಮೇಲೆ ಕರೆದುಕೊಂಡು ಹೋದರು. ಮಾತಾಡ್ತಾ ಮಾತಾಡ್ತಾ ನನ್ನ ಮುಟ್ಟಲು ಶುರು ಮಾಡಿದರು.

ಆದರೆ ನನಗೆ ಆಗ ಬ್ಯಾಡ್‌, ಮತ್ತೆ ಗುಡ್‌ ಟಚ್‌ ಬಗ್ಗೆ ಗೊತ್ತೇ ಇರಲಿಲ್ಲ. ಆಗೆಲ್ಲ ನನಗೆ ಮದುವೆ ಆದರೆ ಮಾತ್ರ ಮಕ್ಕಳು ಆಗತ್ತೆ ಅಂತ ಮಾತ್ರ ಗೊತ್ತಿತ್ತು. ನಂತರ ನಾನು ಓಡಿ ಬಂದು ರೂಮ್‌ಗೆ ಬಂದು ಲಾಕ್‌ ಮಾಡಿಕೊಂಡೆ. ಆದರೆ ನನಗೆ ತುಂಬಾ ಅನ್‌ಕಮ್‌ಫರ್ಟಬಲ್‌ ಆಗಿದ್ದು ನಂಗೆ ಗೊತ್ತಾಯ್ತು.

ನಂತರ ನಾನು ಸ್ಕೂಲ್‌ ಅಂತ ಸುಮ್ಮನಾದೆ, ಬಳಿಕ ಸೆಕೆಂಡ್‌ ಪಿಯುಸಿಯಲ್ಲಿ ಫೇಲ್‌ ಆದೆ. ಬಳಿಕ ನನಗೆ ಮದುವೆ ಪ್ರಪೋಸಲ್‌ ಎಲ್ಲ ಬಂತು. ಸೆಕೆಂಡ್‌ ಪಿಯುಸಿ ಓದುವಾಗ, ಒಬ್ಬರಿಗೆ ನನ್ನ ಮೇಲೆ ಇಷ್ಟ ಇತ್ತು. ಆದರೆ ನನಗೆ ಇಷ್ಟವಿರಲಿಲ್ಲ. ಆ ವಯಸ್ಸಿನಲ್ಲಿ ನನಗೆ ಏನು ಗೊತ್ತಾ ಇರ್ತಿರಲಿಲ್ಲ.

ನನಗೆ ಫಸ್ಟ್‌ ಕ್ರಶ್‌ ವಿಜಯ್‌ರಾಘವೆಂದ್ರ. ಅಷ್ಟೇ ಅಲ್ಲ ಅವರನ್ನ ಮದುವೆ ಆಗಬೇಕು ಅಂದುಕೊಂಡಿದ್ದೆ ಎಂದು ಹೇಳಿದ್ದಾರೆ. ಬಳಿಕ ಮುಂಗಾರು ಮಳೆ ಗಣೇಶ್‌ ಅವರೂ ನನ್ನ ಕ್ರಶ್‌ ಎಂದು ಹೇಳಿಕೊಂಡಿದ್ದಾರೆ.

ಇನ್ನು ಲೈಫ್‌ ಪಾರ್ಟನರ್‌ ಬಗ್ಗೆ ಅನುಪಮಾ ಮಾತನಾಡಿ, ಒಂದು ಮಕ್ಕಳು ಸಾಕು ನನಗೆ. ಹೆಣ್ಣು ಮಗುನೇ ಬೇಕು ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಇರ್ತಾರೆ ಅಂತ. ಮದುವೆ ಆಗಿದ್ರೆ ಬೇರೆ ಉದ್ಯೋಗದಲ್ಲಿ ಇರ್ತೀನಿ. ಇಲ್ಲ ಅಂದರೆ ನಾನು ಪ್ರೊಡ್ಯೂಸರ್‌ ಆಗಬೇಕು ಅಂತ ಆಸೆ ಕೂಡ ಇದೆ ಎಂದರು.

‘ಅಕ್ಕ’ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಗಮನ ಸೆಳೆದರು. ಬಿಗ್‌ಬಾಸ್ ಸ್ಪರ್ಧಿಯಾಗಿ ಮನೆಯೊಳಗೆ ಹೋಗಿದ್ದರು. ‘ಮಜಾ ಭಾರತ’, ‘ರಾಜಾ-ರಾಣಿ’, ‘ನನ್ನಮ್ಮ ಸೂಪರ್ ಸ್ಟಾರ್’ ಸೇರಿ ಕೆಲ ಕಾರ್ಯಕ್ರಮಗಳ ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ‘ಆ ಕರಾಳ ರಾತ್ರಿ’, ‘ಪುಟ 109’, ‘ತ್ರಯಂಬಕಂ’, ‘ಬೆಂಕಿಯಲ್ಲಿ ಅರಳಿದ ಹೂವು’ ಸಿನಿಮಾಗಳಲ್ಲಿ ಅನುಪಮಾ ನಟಿಸಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು