Tue. Mar 18th, 2025

Maharashtra: ಮಹಿಳೆಯ ಮಾಂಗಲ್ಯ ಸರ ಕದ್ದು ಪತಿಯ ತಲೆಯನ್ನು ಕಲ್ಲಿನಿಂದ ಜಜ್ಜಿದ ದುಷ್ಕರ್ಮಿಗಳು

ಮಹಾರಾಷ್ಟ್ರ,(ಮಾ.18): ಇತ್ತೀಚಿನ ದಿನಗಳಲ್ಲಿ ಸರಗಳವು ಪ್ರಕರಣಗಳು ಹೆಚ್ಚಾಗುತ್ತಿದೆ. ಮಹಾರಾಷ್ಟ್ರದಲ್ಲಿ ದುಷ್ಕರ್ಮಿಗಳು ಮಹಿಳೆಯೊಬ್ಬರ ಮಾಂಗಲ್ಯ ಸರ ಕದ್ದು, ಪತಿಗೆ ಕಲ್ಲಿನಿಂದ ಜಜ್ಜಿರುವ ಘಟನೆ ವರದಿಯಾಗಿದೆ. ಪತ್ನಿಯ ಸರ ಕದ್ದವನ್ನು ಬೆನ್ನಟ್ಟುತ್ತಿರುವಾಗ ದುಷ್ಕರ್ಮಿಗಳು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದು, ಕಲ್ಲಿನಿಂದ ತಲೆಯನ್ನು ಜಜ್ಜಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ⭕ಸುಳ್ಯ: ಸುಳ್ಯದ ಯುವಕ ಬ್ಯಾಂಕಾಕ್‍ನಲ್ಲಿ ನಿಗೂಢವಾಗಿ ಮೃತ್ಯು!

ಹೇಮಂತ್ ಗವಾಂಡೆ ತನ್ನ ಪತ್ನಿಯೊಂದಿಗೆ ರೈಲ್ವೆ ನಿಲ್ದಾಣದಲ್ಲಿದ್ದಾಗ ಕೆಲವು ದುಷ್ಕರ್ಮಿಗಳು ಮಹಿಳೆಯ ಮಂಗಳಸೂತ್ರವನ್ನು ಕಸಿದುಕೊಂಡು ಪರಾರಿಯಾಗಲು ಪ್ರಯತ್ನಿಸಿದರು. ಗವಾಂಡೆ ಆರೋಪಿಗಳನ್ನು ಹಿಡಿಯಲು ಯತ್ನಿಸಿದಾಗ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಮುಖ ಹಾಗೂ ತಲೆಯನ್ನು ಕಲ್ಲಿನಿಂದ ಜಜ್ಜಿದ್ದಾರೆ.

ಸ್ಥಳೀಯರು ಅವರನ್ನು ಅಕೋಲಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಘಟನೆಯ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪರಾಧಿಗಳನ್ನು ಪತ್ತೆಹಚ್ಚಲು ಸ್ಥಳೀಯ ಅಪರಾಧ ಶಾಖೆ (ಎಲ್‌ಸಿಎಸ್) ಮತ್ತು ವಿಶೇಷ ದಳದಿಂದ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಮನೋಜ್ ಬಹುರೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *