Mon. Apr 7th, 2025

Sullia: ಕಾರಿನಲ್ಲಿ ಹುಚ್ಚಾಟ ಪ್ರಕರಣ – ಸುಮೋಟೊ ಕೇಸ್ ದಾಖಲಾಗುತ್ತಿದ್ದಂತೆ ಯುವಕರು ಎಸ್ಕೇಪ್

ಸುಳ್ಯ:(ಎ.7) ಇಲ್ಲಿನ ಸಂಪಾಜೆ ಬಳಿ ಕಾರಿನಲ್ಲಿ ಹುಚ್ಚಾಟ ಮೆರೆದ ಪ್ರಕರಣದಲ್ಲಿ ಸುಮೋಟೊ ಕೇಸ್ ದಾಖಲಾಗುತ್ತಿದ್ದಂತೆ ಯುವಕರು ತಲೆಮರೆಸಿಕೊಂಡಿದ್ದಾರೆ.

ಇದನ್ನೂ ಓದಿ: 🔴ಉಜಿರೆ: ಇಂಡೋನೇಷ್ಯಾದಲ್ಲಿ ಎಫ್‌ಎಸ್‌ಎ ಇಂಡಿಯಾ ತ್ರೋಬಾಲ್ ಟೀಮ್‌ ಅನ್ನು ಪ್ರತಿನಿಧಿಸಲಿರುವ ವಿಲೋನಾ ಡಿಕುನ್ಹಾ

ಭಟ್ಕಳ ಮೂಲದ ಯುವಕರ ಕಾರಿನಲ್ಲಿ ಹುಚ್ಚಾಟ ಮೆರೆದಿರುವ ವೀಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಸುಳ್ಯ ಠಾಣೆಯಲ್ಲಿ BNS ಆಕ್ಟ್ 281 IMV ಆಕ್ಟ್ ನ 184 ಸೆಕ್ಷನ್ ಅಡಿ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಯುವಕರು ಎಸ್ಕೇಪ್ ಆಗಿದ್ದಾರೆ.

ಸಂಪಾಜೆ-ಸುಳ್ಯ ರಸ್ತೆಯಲ್ಲಿ KA09MG5880 ನಂಬರ್‌ನ ಕಾರಿನಲ್ಲಿ ಒಟ್ಟು ಏಳು ಮಂದಿ ಯುವಕರು ಪ್ರಯಾಣಿಸುತ್ತಿದ್ದರು. ಇವರಲ್ಲಿ ಐವರು ಕಾರಿನ ಸನ್ ರೂಫ್ ಮತ್ತು ಕಿಟಿಕಿಯಿಂದ ಹೊರಬಂದು ಡ್ಯಾನ್ಸ್ ಮಾಡುತ್ತಾ ಹುಚ್ಚಾಟ ಮೆರೆದಿದ್ದರು. ಚಾಲಕ ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗುತ್ತಾ ಯುವಕರು ಪುಂಡಾಟ ಮೆರೆದಿದ್ದರು. ಕಾರಿನ ಹಿಂಬದಿ ಬರುತ್ತಿದ್ದ ವಾಹನದಲ್ಲಿದ್ದವರು ಇದರ ವೀಡಿಯೋ ಮಾಡಿದ್ದಾರೆ. ಈ ವೀಡಿಯೋ ವೈರಲ್ ಆಗಿತ್ತು.

Leave a Reply

Your email address will not be published. Required fields are marked *