ಬೆಳಾಲು, ಎ.7( ಯು ಪ್ಲಸ್ ಟಿವಿ): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಬೆಳಾಲು ಗ್ರಾಮದ ಕೊಡೋಳುಕೆರೆ – ಮುಂಡ್ರೋಟ್ಟು ರಸ್ತೆಯಲ್ಲಿ ಮಾರ್ಚ್.22 ರ ಶನಿವಾರದಂದು ರಂದು ಬೆಳಗ್ಗೆ ಮೂರುವರೆ ತಿಂಗಳ ಹೆಣ್ಣು ಮಗುವನ್ನು ಬಿಟ್ಟು ಹೋದ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ.

ಇದನ್ನೂ ಓದಿ: ⭕ಪುತ್ತೂರು: ನೀರು ಕೇಳುವ ನೆಪದಲ್ಲಿ ಬಂದು ಪಿಯುಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ
ಧರ್ಮಸ್ಥಳ ಪೊಲೀಸರು ಮಗುವಿನ ತಂದೆಯನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಇಬ್ಬರು ಕೂಡ ಸ್ವ ಇಚ್ಛೆಯಿಂದ ಮದುವೆಯಾಗುವುದಾಗಿ ಪೊಲೀಸರ ಮುಂದೆ ರಂಜಿತ್ ಗೌಡ ಒಪ್ಪಿದ್ದಾರೆ ಎನ್ನಲಾಗಿತ್ತು.


ಆ ಮೂಲಕ ಪ್ರಕರಣ ಸುಖಾಂತ್ಯವಾಗಿದೆ. ಎಪ್ರಿಲ್.6 ರಂದು ಎರಡು ಕುಟುಂಬದವರ ಒಪ್ಪಿಗೆಯ ಮೇರೆಗೆ ನಡ ಗ್ರಾಮದ ಕುತ್ರೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ.
ದೇವಸ್ಥಾನದ ಅರ್ಚಕರ ಪೌರೋಹಿತ್ಯದಲ್ಲಿ ಮದುವೆ ನಡೆದಿದೆ. ಎರಡೂ ಕುಟುಂಬದವರು ಈ ಮದುವೆಗೆ ಹಾಜರಿದ್ದರು.

ಬೆಳಾಲು ಮಾಯದ ತಿಮ್ಮಪ್ಪ ಗೌಡರ ಪುತ್ರ ರಂಜಿತ್ ಮತ್ತು ಧರ್ಮಸ್ಥಳದ ಕೊಳಂಗಾಜೆ ಧರ್ಣಪ್ಪ ಗೌಡರ ಪುತ್ರಿ ಸುಶ್ಮಿತಾ ಅವರ ವಿವಾಹ ಎ.6 ರಂದು ನಡೆದಿದೆ. ಮಗುವನ್ನು ಮುಂದೆ ಕಾನೂನಾತ್ಮಕವಾಗಿ ಪಡೆಯುವುದಾಗಿ ಕುಟುಂಬದ ಮೂಲಗಳು ತಿಳಿಸಿರುವ ಕುರಿತು ವರದಿಯಾಗಿದೆ.

