Mon. Apr 7th, 2025

Belal: ಮಾಯಾದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೀರು ಉಳಿಸಿ, ಭವಿಷ್ಯದ ನೀರು ಇಂದಿನ ಕಾಳಜಿ ಅಭಿಯಾನ

ಬೆಳಾಲು:(ಎ.7)ಜಗವೊಂದಿದ್ದರೆ ಜಗವೆಲ್ಲ ನೆಮ್ಮದಿಯಿಂದಿರುವುದು ಎನ್ನುವ ಹಾಗೆ ನೀರು ಉಳಿಸಿ ಅಭಿಯಾನ ದೊಂದಿಗೆ ಮತ್ತು ಅಳಿವಿನ ಅಂಚಿನಲ್ಲಿರುವ ಪಕ್ಷಿ ಸಂಕುಲವನ್ನು ಉಳಿಸೋಣ ಎನ್ನುವ ಮಾತೃಶ್ರೀ ಹೇಮಾವತಿ ಅಮ್ಮನವರ ಸಂಕಲ್ಪದಂತೆ ಇಂದು ಸುಡು ಬೇಸಿಗೆಯಲ್ಲಿ ಬಿರು ಬಿಸಿಲಿನ ಬೇಗೆಯಿಂದ ಅದೆಷ್ಟೋ ಪಕ್ಷಿ ಸಂಕುಲವು ಜೀವ ಜಲದಿಂದ ತತ್ತರಿಸಿ ಹೋಗಿದೆ.

ಇದನ್ನೂ ಓದಿ: 🚲ಬೆಳಾಲು: ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಬೈಸಿಕಲ್ ವಿತರಣೆ

ಅವುಗಳಿಗೆ ಜೀವಜಲದ ವ್ಯವಸ್ಥೆ ಮಾಡಬೇಕು ಎಂಬ ಮಾರ್ಗದರ್ಶನದಂತೆ ಉಜಿರೆ ವಲಯದ ಮಾಯಾ ಕಾರ್ಯಕ್ಷೇತ್ರದ ಒಕ್ಕೂಟ ಸಭೆಯಲ್ಲಿ ಸಂಘದ ಸದಸ್ಯರಿಗೆ ತಮ್ಮ ತಮ್ಮ ಮನೆಯಲ್ಲಿ ಸುತ್ತ ಮುತ್ತ ಮಣ್ಣಿನ ಮಡಿಕೆ, ಪತ್ರೆ ಗಳಲ್ಲಿ ಜಲದ ವ್ಯವಸ್ಥೆಯನ್ನು ಕಲ್ಪಿಸಿ ಪಕ್ಷಿ ಸಂಕುಲಗಳ ಜೀವ ಉಳಿಸೋಣ ಎನ್ನುವ ಸಂಕಲ್ಪದಂತೆ, ಅತಿ ಹೆಚ್ಚು ನೀರನ್ನು ಹಾಳು ಮಾಡದಂತೆ ಸದಸ್ಯರಿಗೆ ಮಾಹಿತಿ ನೀಡಿ ಪಕ್ಷಿ ಸಂಕುಲಗಳಿಗೆ ಜೀವಜಲದ ವ್ಯವಸ್ಥೆ ಮಾಡಲಾಯಿತು.


ಈ ಸಂದರ್ಭದಲ್ಲಿ ಲೆಕ್ಕ ಪರಿಶೋಧಕರಾದ ನವೀನ್, ಮೇಲ್ವಿಚಾರಕರಾದ ಶ್ರೀಮತಿ ವನಿತಾ, ಒಕ್ಕೂಟದ ಅಧ್ಯಕ್ಷರಾದ ಗಂಗಾಧರ್ ಸಾಲ್ಯಾನ್, ಒಕ್ಕೂಟದ ಪದಾಧಿಕಾರಿಗಳು, ಹಿರಿಯ ನವಜೀವನ ಸದಸ್ಯ ಕುಂಭ ಗೌಡ, ಮಾಜಿ ಅಧ್ಯಕ್ಷರಾದ ಶಿವಪ್ಪಗೌಡ, ಸೇವಾಪ್ರತಿನಿಧಿ ಪ್ರಭಾವತಿ, ಸಂಘದ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *