Sat. Apr 19th, 2025

Goa: ಗೋವಾದ ಮುಖ್ಯಮಂತ್ರಿ ಪ್ರಮೋದ ಸಾವಂತ ಇವರಿಂದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಜಾಲತಾಣ ಲೋಕಾರ್ಪಣೆ !

ಪಣಜಿ (ಗೋವಾ) – ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಇವರ 83 ನೆಯ ಜನ್ಮೋತ್ಸವ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವ ವರ್ಷದ ಪ್ರಯುಕ್ತ ಫರ್ಮಾಗುಡಿ, ಫೊಂಡಾ , ಗೋವಾ ಇಲ್ಲಿ 17 ರಿಂದ 19 ಮೇ 2025 ಈ ಸಮಯದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಭವ್ಯ ಆಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ⭕ಮೂಲ್ಕಿ: ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮರಥೋತ್ಸವದಲ್ಲಿ ಏಕಾಏಕಿ ಕುಸಿದ ತೇರಿನ ಮೇಲ್ಭಾಗ!!

ಈ ಮಹೋತ್ಸವದ https://SanatanRashtraShankhnad.in ಈ ಇಂಗ್ಲಿಷ್ ಭಾಷೆಯಲ್ಲಿನ ಜಾಲತಾಣದ ಉದ್ಘಾಟನೆ ಗೋವಾ ರಾಜ್ಯದ ಮುಖ್ಯಮಂತ್ರಿ ಶ್ರೀ. ಪ್ರಮೋದ ಸಾವಂತ ಇವರಿಂದ ಪರ್ವರಿ, ಗೋವಾ ಇಲ್ಲಿಯ ಮುಖ್ಯಮಂತ್ರಿ ಕಾರ್ಯಾಲಯದಲ್ಲಿ ನೆರವೇರಿಸಲಾಯಿತು.

ಈ ಸಮಯದಲ್ಲಿ ಮುಖ್ಯಮಂತ್ರಿಗಳು ಜಾಲತಾಣದ ಅವಲೋಕನ ಮಾಡಿದರು, ಹಾಗೂ ಕಾರ್ಯಕ್ರಮಕ್ಕಾಗಿ ಶುಭಾಶಯಗಳನ್ನು ನೀಡಿದರು. ಈ ಸಮಯದಲ್ಲಿ ಈ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ’ ಸ್ವಾಗತ ಸಮಿತಿಯಲ್ಲಿನ ಪೂ. ಪೃಥ್ವಿರಾಜ ಹಜಾರೆ, ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರು ಶ್ರೀ. ರಮೇಶ ಶಿಂಧೆ ಹಾಗೂ ಶ್ರೀ. ಮಧುಸೂದನ ಕುಲಕರ್ಣಿ ಮತ್ತು ನ್ಯಾಯವಾದಿ ರಾಜೇಶ್ ಗಾವಕಾರ ಇವರೆಲ್ಲರೂ ಉಪಸ್ಥಿತರಿದ್ದರು.

ಈ ಜಾಲತಾಣದಲ್ಲಿ ಸನಾತನ ರಾಷ್ಟ್ರಶಂಖನಾದ ಮಹೋತ್ಸವದ ಬಗ್ಗೆ ಮಾಹಿತಿ ಉಪಲಬ್ಧ ಮಾಡಿ ಕೊಡಲಾಗುವುದು. ಪ್ರಸ್ತುತ ವೆಬ್ ಸೈಟ್ ನಲ್ಲಿ ಸನಾತನ ರಾಷ್ಟ್ರದ ಉದ್ದೇಶ : ಸನಾತನ ರಾಷ್ಟ್ರದ ಶಂಖನಾದ ಮಾಡುತ್ತಿರುವ ಭಗವಾನ್ ಶ್ರೀ ಕೃಷ್ಣನ ಬೋಧ ಚಿನ್ಹೆ; ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಇವರ ಪರಿಚಯ; ಸನಾತನ ಸಂಸ್ಥೆಯ ಮಾಹಿತಿ; ಕಾರ್ಯಕ್ರಮಕ್ಕೆ ಉಪಸ್ಥಿತ ಇರುವ ಸಂತರು, ಮಹಂತರು, ವಿವಿಧ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಗಣ್ಯ ವ್ಯಕ್ತಿಗಳ ಮಾಹಿತಿ; ಸಾಂಸ್ಕೃತಿಕ ಕಾರ್ಯಕ್ರಮ; ಜಾನಪದ ಕಲೆ ಮುಂತಾದ ಪ್ರಾತಿನಿಧಿಕ ಚಿತ್ರಗಳನ್ನು ಇರಿಸಲಾಗಿದೆ. ಮುಂದೆ ಕಾರ್ಯಕ್ರಮದ ದೃಷ್ಟಿಯಿಂದ ಆಗಾಗ ಹೆಚ್ಚಿನ ಮಾಹಿತಿ ಈ ಜಾಲತಾಣದಲ್ಲಿ ಉಪಲಬ್ಧ ಮಾಡಿಕೊಡಲಾಗುವುದು. ಹಾಗೂ ಸನಾತನ ಸಂಸ್ಥೆಯ ವತಿಯಿಂದ ಈ ಮಹೋತ್ಸವಕ್ಕಾಗಿ ಧರ್ಮದಾನ ನೀಡಲು ಕರೆ ನೀಡಲಾಗಿದೆ.

Leave a Reply

Your email address will not be published. Required fields are marked *