Sat. Apr 19th, 2025

Ujire: ಉಜಿರೆಗೆ ಕಾರ್ಯಕ್ರಮಕ್ಕೆ ಬಂದ ಪುನೀತ್‌ ಕೆರೆಹಳ್ಳಿ – ಪುನೀತ್‌ ಕೆರೆಹಳ್ಳಿ ಹಾಗೂ 250 ಕ್ಕೂ ಹೆಚ್ಚು ಬೆಂಬಲಿಗರನ್ನು ವಾಪಸ್ ಕಳುಹಿಸಿದ ಪೋಲಿಸರು

ಉಜಿರೆ:(ಎ.19) ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡ ವತಿಯಿಂದ ಇಂದು ರಾಮೋತ್ಸವ ಕಾರ್ಯಕ್ರಮವು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಚಕ್ರವರ್ತಿ ಸೂಲಿಬೆಲೆ ಆಗಮಿಸಿ ಧಾರ್ಮಿಕ ಉಪನ್ಯಾಸ ಮಾಡಲಿದ್ದಾರೆ.

ಇದನ್ನೂ ಓದಿ: 🟣ಪುತ್ತೂರು: ಮುಳಿಯ Gold & Diamonds ಆರಂಭೋತ್ಸವ

ಈ ಕಾರ್ಯಕ್ರಮವನ್ನು ವೀಕ್ಷಿಸಲು ಹಿಂದೂ ಗೋ ರಕ್ಷಕ ಪುನೀತ್ ಕೆರೆಹಳ್ಳಿ ಬರುತ್ತಿದ್ದ ವೇಳೆ ಬೆಳ್ತಂಗಡಿ ಪೊಲೀಸರು ಉಜಿರೆಯ ಕಾಲೇಜು ರಸ್ತೆಯಲ್ಲಿ ಅಡ್ಡಹಾಕಿ ವಾಪಸ್ ಕಳುಹಿಸಿದ್ದಾರೆ.

ಧರ್ಮಸ್ಥಳ ಕಡೆಯಿಂದ ಉಜಿರೆ ಕಡೆ ಎ.19 ರಂದು ಸಂಜೆ 4:15 ಕ್ಕೆ ಕಾರಿನಲ್ಲಿ ತನ್ನ ಸುಮಾರು 250 ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಬರುತ್ತಿದ್ದಾಗ ಉಜಿರೆ ಕಾಲೇಜು ರಸ್ತೆಯಲ್ಲಿ ಬೆಳ್ತಂಗಡಿ ಪೊಲೀಸರು ಅಡ್ಡಹಾಕಿ ಡಿಸಿ ಆದೇಶ ತೋರಿಸಿ ಮನವರಿಕೆ ಮಾಡಿದ್ದಾರೆ. ಇದರಿಂದ ಪುನೀತ್ ಕೆರೆಹಳ್ಳಿ ಮತ್ತು ಬೆಂಬಲಿಗರು ವಾಪಸ್ ಹೋಗಿದ್ದಾರೆ.

Leave a Reply

Your email address will not be published. Required fields are marked *