Thu. Apr 24th, 2025

Ujire: ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ – ದಾಳಿ ಖಂಡಿಸಿ ವಿ.ಹಿಂ.ಪ. ಬಜರಂಗದಳ ಬೆಳ್ತಂಗಡಿ ಪ್ರಖಂಡದ ವತಿಯಿಂದ ಶ್ರದ್ಧಾಂಜಲಿ ಸಭೆ ಮತ್ತು ಪ್ರತಿಭಟನೆ

ಉಜಿರೆ:(ಎ.24) ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷದ್‌ ಬಜರಂಗದಳ ಬೆಳ್ತಂಗಡಿ ಪ್ರಖಂಡದ ವತಿಯಿಂದ ಎಪ್ರಿಲ್ 23‌ ರಂದು ಉಜಿರೆ ಪೇಟೆಯಲ್ಲಿ ಶ್ರದ್ಧಾಂಜಲಿ ಸಭೆ ಮತ್ತು ಪ್ರತಿಭಟನೆ ನಡೆಯಿತು.


ಈ ಪ್ರತಿಭಟನಾ ಸಭೆಯನ್ನೂದ್ಧೇಶಿಸಿ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಮತ್ತು ನ್ಯಾಯವಾದಿಯಾದ ವಸಂತ ಮರಕಡರವರು ಮಾತನಾಡಿದರು.


ಬಜರಂಗದಳ ಪುತ್ತೂರು ಜಿಲ್ಲಾ ಸಹ ಸಂಯೋಜಕರಾದ ದಿನೇಶ್ ಚಾರ್ಮಾಡಿ, ವಿಹಿಂಪ ಬೆಳ್ತಂಗಡಿ ಪ್ರಖಂಡ ಅಧ್ಯಕ್ಷರಾದ ವಿಷ್ಣು ಮರಾಠೆ,ವಿಹಿಂಪ ಬೆಳ್ತಂಗಡಿ ಪ್ರಖಂಡ ಉಪಾಧ್ಯಕ್ಷರಾದ ಸತೀಶ್ ನೆರಿಯ, ವಿಹಿಂಪ ಬೆಳ್ತಂಗಡಿ ಪ್ರಖಂಡ ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ, ಬಜರಂಗದಳ ತಾಲೂಕು ಸಂಯೋಜಕರಾದ ಸಂತೋಷ್ ಅತ್ತಾಜೆ,

ವಿಹಿಂಪ ತಾಲೂಕು ಗೋ ರಕ್ಷಾ ಪ್ರಮುಖ್ ರಮೇಶ್ ಧರ್ಮಸ್ಥಳ, ಬಜರಂಗದಳ ತಾಲೂಕು ಸಹ ಸಂಯೋಜಕ ಅನಂತು ಉಜಿರೆ, ವಿಹಿಂಪ ಬಜರಂಗದಳ ತಾಲೂಕು ಪ್ರಸಾರ ಪ್ರಚಾರ ಪ್ರಮುಖ್ ನಾಗೇಶ್ ಕಲ್ಮಂಜ, ಸಂಘದ ಹಿರಿಯರು ಹಾಗೂ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಅಧ್ಯಕ್ಷರಾದ ಶ್ರೀನಿವಾಸ ಧರ್ಮಸ್ಥಳ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *