Thu. Apr 24th, 2025

Belthangady: ಕಾಶ್ಮೀರ ಉಗ್ರಗಾಮಿ ದಾಳಿ ಶಾಂತಿ ಮತ್ತು ಮಾನವೀಯತೆಗೆ ಎದುರಾದ ಹೊಡೆತ – ಹರೀಶ್‌ ಪೂಂಜ

ಬೆಳ್ತಂಗಡಿ: (ಎ.24)ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ಉಗ್ರಗಾಮಿ ದಾಳಿ ಆಘಾತಕಾರಿ. ಈ ಭಯೋತ್ಪಾದಕ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ.


ಈ ಕೂಡಲೇ ಕೇಂದ್ರಸರ್ಕಾರ ನಾವು “ಬಯಸುವ ನ್ಯಾಯ”ವನ್ನು ಒದಗಿಸುವ ಕಾರ್ಯಕ್ಕೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಹಾಗೂ ಗೃಹಸಚಿವರಾದ ಅಮಿತ್ ಷಾ ಕೈಗೊಳ್ಳುತ್ತಾರೆ.

ಇದನ್ನೂ ಓದಿ: 🛑ಉಜಿರೆ: ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ಭಯೋತ್ಪಾದಕ ದಾಳಿ


ನೆನಪಿಡಿ, ಎಲ್ಲಿಯವರೆಗೆ ಮತವೊಂದು ಇತರ ಮತದವರನ್ನುಕೊಲ್ಲುವುದೇ ತಮ್ಮ ಮತದ ಉಳಿವಿಗೆ ದಾರಿ ಎಂದು ತನ್ನ ಸಮುದಾಯದವರಿಗೆ ಬೋಧಿಸುತ್ತಿರುತ್ತದೋ, ಅಲ್ಲಿಯವರೆಗೆ ಈ ಎಲ್ಲರಿಗೂ ಆಪತ್ತು ತಪ್ಪಿದ್ದಲ್ಲ.


ಹೌದು, ಒಂದು ಕ್ಷಣ ಇಸ್ಲಾಂ ಗೂ ಭಯೋತ್ಪಾದಕರಿಗೂ ಸಂಬಂಧ ಇಲ್ಲ ಎಂದು ನೀವು ಹೇಳುವುದನ್ನು ಒಪ್ಪಿಕೊಳ್ಳೋಣ, ನಿನ್ನೆ ಹುಡುಕಿ ಹುಡುಕಿ ಹಿಂದುಗಳನ್ನು ಕೊಂದು ಆ ರಾಕ್ಷಸರು ಮೊಳಗಿಸಿದ ಉದ್ಘೋಷವನ್ನು, ನಾವಿಲ್ಲಿನ ಬೀದಿ ಬೀದಿಗಳಲ್ಲಿ ದಿನಕ್ಕೆ ಐದು ಬಾರಿ ಕೇಳುತ್ತೇವೆ. ಮತ್ತೆ ಹೇಗೆ ಇದಕ್ಕೂ ಅದಕ್ಕೂ ಸಂಬಂಧ ಇಲ್ಲ ಎಂದು ಹೇಳುತ್ತೀರಿ???


ಕೇಡು ವಿಜೃಂಭಿಸುವಾಗ ಪ್ರತಿಘಾತ ಮಾಡದ ಸಾತ್ವಿಕತೆ/ಮೌನ ನಿಷ್ಪ್ರಯೋಜಕವಾಗುತ್ತದೆ. ಕೇವಲ ಹತ್ತು ಜನ ಕೆಟ್ಟವರಿಗಾಗಿ ಒಂದು ಸಮುದಾಯಕ್ಕೆ ಭಯೋತ್ಪಾದನೆಯ ಕಳಂಕ ಹಾಕಬಾರದುಎನ್ನುತ್ತಾರೆ. ಹತ್ತು ಕೆಟ್ಟವರನ್ನ ಬಿಡಿ ಉಳಿದ 90 ಒಳ್ಳೆಯ ಮುಸಲ್ಮಾನರಲ್ಲಿ ಒಬ್ಬರು ಧ್ವನಿಯೆತ್ತಿ ಖಂಡಿಸಿದ್ದನ್ನು ಕೇಳಲೇ ಇಲ್ಲ, ಇದು ದುರಂತ. ಘಟನೆಯನ್ನು ಖಂಡಿಸಿ ಬೀದಿಗೆ ಇಳಿದಿದ್ದನ್ನು ಕಾಣಲಿಲ್ಲ. ಸಾತ್ವಿಕ ಮುಸಲ್ಮಾನ್ ಬಂಧುಗಳೇ, ಇದು ನಿಮಗೂ ಎಚ್ಚರಿಕೆಯ ಕರೆಗಂಟೆ.

ನಿಮ್ಮ ಮೌನ ನಿಮ್ಮನ್ನೇ ಕಾಡಲಿದೆ. ನಿಮ್ಮ ಮತದೊಳಗಿನ ಕೊಳಕನ್ನು ನೀವಿನ್ನು ಸಹನುಭೂತಿಯಿಂದ ನೋಡುತ್ತಾ ಕುಳಿತರೆ ಮುಂದಾಗುವ ಎಲ್ಲಾ ಅನಾಹುತಗಳಲ್ಲಿ ನೀವೂ ಪಾಲುದಾರರಾಗುತ್ತೀರಿ. ನಿಮ್ಮ ಮೌನವೇ ಉಗ್ರಗಾಮಿಗಳಿಗೆ ಶ್ರೀ ರಕ್ಷೆ ಆಗದಂತೆ ನೋಡಿಕೊಳ್ಳಿ ಎಂದು ಬೆಳ್ತಂಗಡಿ ಶಾಸಕರಾದ ಹರೀಶ್‌ ಪೂಂಜ ರವರು ಹೇಳಿದ್ದಾರೆ.

Leave a Reply

Your email address will not be published. Required fields are marked *