Sat. Apr 26th, 2025

Belthangady: ಇನ್ವರ್ಟರ್ ನೀಡುವ ವಿಚಾರಕ್ಕೆ ಎರಡು ತಂಡಗಳ ನಡುವೆ ಹೊಡೆದಾಟ – ಪ್ರಕರಣ ದಾಖಲು

ಬೆಳ್ತಂಗಡಿ:(ಎ.26) ಇನ್ವರ್ಟರ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಶಿಪಟ್ಣದಲ್ಲಿ ಎರಡು ತಂಡಗಳು ಕತ್ತಿಯಿಂದ ಹಾಗೂ ಕಬ್ಬಿಣದ ರಾಡ್ ನಿಂದ ಹೊಡೆದಾಟ ನಡೆಸಿದ್ದು ಎರಡೂ ಕಡೆಯವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಎರಡೂ ಗುಂಪಿನ ಏಳು ಮಂದಿಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: 🟣ಕನ್ಯಾಡಿ: ಸೇವಾಭಾರತಿ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರೀಮತಿ ರೋಹಿಣಿ ಅಚ್ಯುತ ಗೌಡ ಇವರಿಂದ ದೇಣಿಗೆ

ಮರೋಡಿ ಗ್ರಾಮದ ಪೆಂಚಾರ್ ಪಿಜತಕಟ್ಟೆ ನಿವಾಸಿ ಸುಜಿತ್ ವೇಣೂರು ಪೊಲೀಸರಿಗೆ ನೀಡಿದ ದೂರಿನಲ್ಲಿ ಕಾಶಿಪಟ್ಟ ಗ್ರಾಮದ ಮಿತ್ತೊಟ್ಟು ಅಭಿಷೇಕ್ ನೊಂದಿಗೆ ಕೆಲಸ ಮಾಡಿಕೊಂಡಿದ್ದು, ಅಭಿಷೇಕ್‌ನ ಮನೆಯಲ್ಲಿ ಇಟ್ಟಿದ್ದ ಇನ್‌ ವಟರನ್ನು ವಾಪಾಸು ಅಂಗಡಿಗೆ ತಂದುಕೊಡುವಂತೆ ಸುಜಿತ್ ಕೇಳಿದಾಗ ಬೇಕಾದಲ್ಲಿ ಮನೆಗೆ ಬಂದು ತೆಗೆದುಕೊಂಡು ಹೋಗುವಂತೆ ಅಭಿಷೇಕ್ ತಿಳಿಸಿದ್ದ.


ಅದರಂತೆ ಎ.24 ರಂದು ರಾತ್ರಿ 10 ಗಂಟೆಗೆ ಸುಜಿತ್ ತನ್ನ ಸ್ನೇಹಿತರಾದ ಆಕಾಶ್, ಜಗದೀಶ @ ಜಗ್ಗು, ಸಂಜಯ್ ಮತ್ತು ಸವಿನ್‌ ಎಂಬವರೊಂದಿಗೆ ಕಾಶಿಪಟ್ಟ ಮಿತ್ತೊಟ್ಟು ಅಭಿಷೇಕ್‌ನ ಮನೆಯ ಬಳಿಗೆ ಬಂದು ಇನ್ ವರ್ಟರ್ ಕೇಳಿದಾಗ, ಅಭಿಷೇಕ್ ಇನ್‌ ವರ್ಟರ್ ಕೊಡುವುದಿಲ್ಲ. ನೀನು ಏನು ಮಾಡುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದಾಗ, ಅವರೊಳಗೆ ಮಾತಿನ ಚಕಮಕಿ ನಡೆದು ಅಲ್ಲಿಗೆ ಬಂದ ಅಭಿಷೇಕ್‌ನ ತಂದೆ ಧರ್ಣಪ್ಪ ಪೂಜಾರಿ ಎಂಬವರು ಜಗ್ಗು @ ಜಗದೀಶನಿಗೆ ಟಾರ್ಚ್ ಲೈಟ್ ನಲ್ಲಿ ಹಲ್ಲೆ ನಡೆಸಿ, ಅಭಿಷೇಕನನ್ನು ಮನೆಗೆ ಕರೆದುಕೊಂಡು ಹೋಗಿದ್ದು, ಆ ಸಮಯ ಮನೆಯ ಗೇಟಿನ ಬಳಿ ಅಭಿಷೇಕನು ಕತ್ತಿಯಿಂದ ಸುಜಿತ್ ಹಾಗೂ ಆಕಾಶ್‌ಗೆ ಕಡಿದು, ಧರ್ಣಪ್ಪ ಪೂಜಾರಿ ಟಾರ್ಚ್‌ ಲೈಟ್‌ನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ವೇಣೂರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮತ್ತೊಂದೆಡೆ ವೇಣೂರು ಪೊಲೀಸರಿಗೆ ದೂರು ನೀಡಿರುವ ಧರ್ಣಪ್ಪ ಪೂಜಾರಿ ಸುಜಿತ್, ಜಗ್ಗು ಯಾನೆ ಜಗದೀಶ್, ಆಕಾಶ್, ಸವಿನ್ ಹಾಗೂ ಸಂಜಯ್ ಎಂಬವರು ತನ್ನ ಮನೆಗೆ ಅಕ್ರಮ ಪ್ರವೇಶ ಮಾಡಿ ತನ್ನ ಮೇಲೆ ಹಾಗೂ ಮಗ ಅಭಿಷೇಕ್ ನ ಮೇಲೆ ಕಬ್ಬಿಣದ ರಾಡ್ ನಿಂದ ಹಾಗೂ ಕೈಯಿಂದ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಘಟನೆಯ ಬಗ್ಗೆ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು