ಬೆಳ್ತಂಗಡಿ:(ಎ.30) ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ 2001 ರಲ್ಲಿ ಪ್ರಾರಂಭವಾಗಿ ಶಿಕ್ಷಣ ಕ್ಷೇತ್ರ, ಕ್ರೀಡಾ ಕ್ಷೇತ್ರ, ಸ್ಕೌಟ್ಸ್, ಗೈಡ್ಸ್, ಹಾಗೂ ಬುಲ್ ಬುಲ್ ಕ್ಷೇತ್ರದಲ್ಲಿ ಸಾವಿರಾರು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರನ್ನು ಗಳಿಸಿರುವ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಇದರ 25ನೇ ವರ್ಷದ ರಜತಮಹೋತ್ಸವ ಬೆಳ್ಳಿಹಬ್ಬವನ್ನು ಆಚರಿಸುತ್ತಿದ್ದು,

ಇದನ್ನೂ ಓದಿ: ⭕ಉಡುಪಿ: ಗುಂಡು ಹಾರಿಸಿಕೊಂಡು ಉದ್ಯಮಿ ಆತ್ಮಹತ್ಯೆ!!
ಈ ಸಂಭ್ರಮದ ಪ್ರಯುಕ್ತವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಇವರನ್ನು ಶಾಲಾ ಆಡಳಿತ ಮಂಡಳಿ ಭೇಟಿಯಾಗಿ ಶಾಲಾ ಕಾರ್ಯ ವೈಖರಿಯನ್ನು ಹಾಗೂ ರಜತಾ ಮಹೋತ್ಸವ ಬೆಳ್ಳಿಹಬ್ಬದ ಪ್ರಯುಕ್ತ 1.50 ಕೋಟಿ ವೆಚ್ಚದಲ್ಲಿ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಬಗ್ಗೆ ನಿರ್ಮಾಣವಾಗುತ್ತಿರುವ ಶಾಲಾ ಅಡಿಟೋರಿಯಂನ ಕೆಲಸ ಕಾರ್ಯದ ಮಾಹಿತಿಯನ್ನು ತಿಳಿಸಲಾಯಿತು.


ಬೆಳ್ಳಿ ಹಬ್ಬ ವರ್ಷಾಚರಣೆಗೆ ಶುಭಾಶಯ ತಿಳಿಸಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ರಿಜಿ ಜಾರ್ಜ್, ಶಾಲಾ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಪ್ರೀತಿ ಜಾರ್ಜ್, ಶಾಲಾ ಆಡಳಿತ ಅಧಿಕಾರಿ ಸಿಸ್ಟರ್ ಮೇಲ್ವಿನ್, ಬೆಳ್ತಂಗಡಿ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷರಾದ ಡಾ. ದೇವಿಪ್ರಸಾದ್ ಬೊಲ್ಮ, ಆಡಳಿತ ಮಂಡಳಿ ಸದಸ್ಯರಾದ ಶ್ರೀ ಆಂಟನಿ ಫೆರ್ನಾಂಡಿಸ್, ಶ್ರೀ ಗ್ಯೂ ಗೋರಿಯಾ ಫೆರ್ನಾಂಡಿಸ್, ಶ್ರೀಮತಿ ಕವಿತಾ, ಶ್ರೀಮತಿ ಗಾಯತ್ರಿ, ಶ್ರೀ ವರ್ಣನ್ ರೋಡ್ರಿಗಸ್, ಹಾಗೂ ಶಿಕ್ಷಕ ರಕ್ಷಕ ಸಂಘದ ಸದಸ್ಯರು, ಅಧ್ಯಾಪಕರು ಉಪಸ್ಥಿತರಿದ್ದರು.


