Wed. Apr 30th, 2025

Bantwal: ಯುವವಾಹಿನಿ ಬಂಟ್ವಾಳದ ಸ್ನೇಹ ಸಮ್ಮಿಲನ

ಬಂಟ್ವಾಳ :(ಎ.30)ಯುವವಾಹಿನಿ ಬಂಟ್ವಾಳ ಘಟಕದ ಕುಟುಂಬ ಸದಸ್ಯರ ಸ್ನೇಹ ಸಮ್ಮಿಲನವು ಎ.27 ರಂದು ನೇಚರ್ ಕ್ವೀನ್ ವಾಮದಪದವಿನಲ್ಲಿ ನಡೆಯಿತು.

ಇದನ್ನೂ ಓದಿ: ☘ಉಜಿರೆ: ಎಸ್.ಡಿ.ಎಂ ಪಿಜಿ ಸೆಂಟರ್‌ನ ಅಕ್ಯಾಡೆಮಿಕ್, ಅಡ್ಮಿನಿಸ್ಟ್ರೇಟಿವ್ ಆಡಿಟ್‌ಗೆ ಚಾಲನೆ

ಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಚಂದ್ರಹಾಸ ಬಳಂಜ ಇವರು ಬೆಳಗ್ಗಿನಿಂದ ಸಂಜೆಯವರೆಗೆ ನಡೆಸಿದ ಚುರುಕಿನ ಕ್ರಿಯಾಶೀಲ ಚಟುವಟಿಕೆಗಳು ಸ್ನೇಹ ಸಮ್ಮಿಲನವನ್ನು ಸ್ಮರಣೀಯವನ್ನಾಗಿಸಿತು

ಯುವ ಸಮೂಹ, ಮಕ್ಕಳು ಹಿರಿಯರು ಸೇರಿದಂತೆ 140 ಯುವವಾಹಿನಿ ಕುಟುಂಬಿಕರು ಭಾಗವಹಿಸಿದ್ದ ಸ್ನೇಹ ಸಮ್ಮಿಲನದ ಯಶಸ್ವಿಯಾಗಿ ಸಂಪನ್ನಗೊಂಡಿತು.

ಮನರಂಜನೆಯ ಜತೆಗೆ ಸದಸ್ಯರ ಕ್ರಿಯಾಶೀಲತೆ, ಪ್ರತಿಭೆ ಅನಾವರಣಗೊಂಡ ವೇದಿಕೆಯಾಯಿತು.

ರಾಯಿ ಅರಳ ಕೊಯಿಲ ಜ್ಞಾನಮಂದಿರದ ಅಧ್ಯಕ್ಷ ಜಯಪ್ರಕಾಶ್ ಜೆ ಎಸ್, ಉಪಾಧ್ಯಕ್ಷ ರಾಜೇಶ್ ಸುವರ್ಣ, ಉದ್ಯಮಿ ದಿನೇಶ್ ಕಾಯರ್‌ಮಾರ್ , ಶ್ರೀ ಕಾರಿಂಜ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ವೀರೇಂದ್ರ ಅಮೀನ್ ವಗ್ಗ ಉಪಸ್ಥಿತರಿದ್ದು, ಶುಭ ಹಾರೈಸಿದರು.

ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಯುವವಾಹಿನಿ ಕುಟುಂಬ ಸದಸ್ಯರ ಆಸಕ್ತಿಗೆ ಕೃತಜ್ಞತೆ ಸಲ್ಲಿಸಿದರು, ಸ್ನೇಹ ಸಮ್ಮಿಲನದ ಸಂಚಾಲಕರಾದ ಬ್ರಿಜೇಶ್ ಮತ್ತು ಪ್ರತಿಮಾ ಅಂಚನ್ ಧನ್ಯವಾದ ಸಲ್ಲಿಸಿದರು.

Leave a Reply

Your email address will not be published. Required fields are marked *