Thu. May 1st, 2025

Belthangady: ಮನೆಯ ಮೇಲೆ ಬಿದ್ದ ಭಾರೀ ಗಾತ್ರದ ಮರ -ನಡ&ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ತೆರವು ಕಾರ್ಯ

ಬೆಳ್ತಂಗಡಿ:(ಮೇ.1) ಎಪ್ರಿಲ್.‌ 30ರಂದು ಸುರಿದ ಭಾರೀ ಗಾಳಿ ಮಳೆಗೆ ನಡ ಗ್ರಾಮದ ಕುತ್ರೋಟ್ಟು ಎಂಬಲ್ಲಿ ಸಂತೋಷ್
ಎಂಬವರ ಮನೆಗೆ ಭಾರೀ ಗಾತ್ರದ ಮರವೊಂದು ಮನೆಯ ಮೇಲೆ ಬಿದ್ದು

ಸುಮಾರು ಹದಿನೈದರಷ್ಟು ಶೀಟುಗಳು, ಕಂಬಗಳು ಹಲವಾರು, ಹಂಚುಗಳು ಬಿದ್ದು ಬಹಳಷ್ಟು ಹಾನಿಯಾಗಿದೆ. ಈ ಸಂದರ್ಭದಲ್ಲಿ ಅಲ್ಲಿಯ ಸ್ಥಳೀಯ ನಡ&ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂ ಸೇವಕರಾದ ಕೇಶವ ರವರು ತಕ್ಷಣ ಸ್ಪಂದನೆ ನೀಡಲು ಗ್ರೂಪ್ ನಲ್ಲಿ ವಿಷಯ ತಿಳಿಸಿದಾಗ

ಕೂಡಲೇ ನಡ&ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸ್ವಯಂ ಸೇವಕರಾದ ಒಲ್ವಿನ್ ಡಿಸೋಜ, ಜಯರಾಮ, ಕೇಶವ ರವರು ಸೇರಿ ಕೂಡಲೇ ಸ್ಥಳಕ್ಕೆ ಆಗಮಿಸಿ ಮೆಷಿನ್ ಯಂತ್ರದಿಂದ ಮರಗಳನ್ನು ತೆರವು ಗೊಳಿಸುವ ಕಾರ್ಯಾಚರಣೆ ನಡೆಸಿದರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಂಜುಳಾ, ಮಾಜಿ ಅಧ್ಯಕ್ಷರಾದ ವಿಜಯ ಗೌಡ ಚಂದ್ರಹಾಸ್ ಹೊಕ್ಕಿಲ ಇವರೆಲ್ಲರೂ ಉಪಸ್ಥಿತರಿದ್ದು, ಶೌರ್ಯ ಸ್ವಯಂ ಸೇವಕರ ಸೇವೆಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿ ಸ್ವಯಂ ಸೇವಕರಿಗೆ ಅಭಿನಂದನೆ ಸಲ್ಲಿಸಿದರು.

Leave a Reply

Your email address will not be published. Required fields are marked *