ಬೆಳ್ತಂಗಡಿ:(ಮೇ.10) ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲು ನಿವಾಸಿ ರೇಷ್ಮಾ ಎನ್ ಬಾರಿಗ ಎಂಬ ವಿದ್ಯಾರ್ಥಿನಿ ತನ್ನ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹ್ಯಾಷ್ ಟ್ಯಾಗ್ “ಧಿಕ್ಕಾರ ಆಪರೇಷನ್ ಸಿಂಧೂರ್(dikkaraoperationsindura)” ಎಂದು ಮೇ 08 ರಂದು ಪೋಸ್ಟ್ ಹಾಕಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಡಿಲೀಟ್ ಮಾಡಿದ್ದಾಳೆ.




ಇದನ್ನೂ ಓದಿ: ⭕⭕ಬೆಳ್ತಂಗಡಿ: ಬೆಳ್ತಂಗಡಿಯ ವಿದ್ಯಾರ್ಥಿನಿಯಿಂದ ‘ಧಿಕ್ಕಾರ ಆಪರೇಷನ್ ಸಿಂಧೂರ’ ಪೋಸ್ಟ್.!!
ಮಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದು, ʼನನ್ನ ಮನೆಯ ದೀಪಕ್ಕೆ ಅವನ ಮನೆಯ ಹಣತೆಯ ತಂದೆ, ಅಲ್ಲಿ ನಂದಿ ಹೋಯಿತು ಬೆಳಕುʼ “ಅವನ ಮನೆಯ ಬೆಳಕಿಗೆ ನನ್ನೊಳಗಿನ ದೀಪ…ಬೆಳಕಿನ ವಿಜೃಂಭಣೆಗಾಗಿ ಹೋರಾಟ ಜಯಿಸಿದು ಕತ್ತಲು…ಎಲ್ಲೆಲ್ಲೂ ಕತ್ತಲು..!#dikkraoperationsindura ಹ್ಯಾಷ್ ಟ್ಯಾಗ್ ಹಾಕಿ ಪೋಸ್ಟ್ ಮಾಡಿದ್ದಾರೆ.
ಪೋಸ್ಟ್ ವೈರಲ್ ಆದ ಬೆನ್ನಲ್ಲೇ ” ಭಾರತ ದೇಶದ ಮೇಲೆ ಅಪಾರ ಪ್ರೀತಿ ಇದೆ ಗೌರವವಿದೆ. ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯು ಸುಖ, ಶಾಂತಿ ನೆಮ್ಮದಿ, ಸಮೃದ್ಧಿಯಿಂದ ಬದುಕಬೇಕು ಎಂಬುದು ನನ್ನ ಕಾಳಜಿ. ಈ ದೇಶದಲ್ಲಿ ಹುಟ್ಟಿರುವ ಬಗ್ಗೆ ಹೆಮ್ಮೆ ಇದೆ. ಏಕೆಂದರೆ ವೈವಿಧ್ಯತೆಯಲ್ಲಿ ಏಕತೆ ಇರುವ ದೇಶ ಭಾರತ. ಈ ದೇಶದ ಮಣ್ಣಿನ ಮಕ್ಕಳಾದ ನಾವು ದ್ವೇಷದ ಕಾರಣ, ಭಯೋತ್ಪಾದನೆಯ ಕಾರಣಕ್ಕಾಗಿ ಮಣ್ಣಾಗುವುದನ್ನು, ನೋವುಗಳನ್ನು ಅನುಭವಿಸುವುದು ನನಗಿಷ್ಟವಿಲ್ಲ.

ಯಾವುದೇ ಯುದ್ಧ ಆದಾಗ ಮಡಿಯುವವರು ಒಂದೆಡೆಯಾದರೆ ಆಯಾ ದೇಶದ ಬಹುತೇಕರು ವಿವಿಧ ಕಾರಣಗಳಿಗಾಗಿ ನೋವು ಅನುಭವಿಸುವಂತಾಗುತ್ತದೆ. ಭಾರತದ ಮೇಲೆ ಭಯೋತ್ಪಾದನೆಯ ಕರಿನೆರಳು ಬೀಳದಿರಲಿ, ಶಾಂತಿ, ಸೌಹಾರ್ದ ನೆಲೆಸಲಿ. ಭಯೋತ್ಪಾದನೆ ನಿರ್ಮೂಲನೆಯಾಗಲಿ. ಸಾವು ನೋವು ಇಲ್ಲದಾಗಲಿ ಎನ್ನುವುದಷ್ಟೇ ನನ್ನ ಉದ್ದೇಶʼ ಎಂದು ರೇಷ್ಮಾ ಹೊಸದಾಗಿ ಪೋಸ್ಟ್ ಮಾಡಿದ್ದಾರೆ.
ರೇಷ್ಮಾ ವಿರುದ್ಧ ಕೊಣಾಜೆ ಪೋಲಿಸ್ ಠಾಣೆಯಲ್ಲಿ THE BHARATIYA NYAYA SANHITA (BNS), 2023 (U/s-192,196,353(1)(b),353(2)) ಎಫ್ ಐ ಆರ್ ದಾಖಲಾಗಿದೆ.

ಪಿರ್ಯಾದಿದಾರರು ಕೊಟ್ಟ ದೂರಿನಲ್ಲಿ ಏನಿದೆ?
ಪಿರ್ಯಾದಿದಾರರು ಈ ದಿನ ದಿನಾಂಕ 07-05-2025 ರಂದು ತಮ್ಮ ಮೊಬೈಲ್ ನಲ್ಲಿ ಇನ್ಸ್ಟಾಗ್ರಾಮ್ ನೋಡುತ್ತಿದ್ದ ಸಮಯದಲ್ಲಿ ಇನ್ಸ್ಟಾಗ್ರಾಮ್ ಖಾತೆಯಲಿ ರೇಷ್ಮಾ ಎಂಬವರು ಭಾರತ ಸೇನೆಯ” ಆಪರೇಷನ್ ಸಿಂಧೂರ್ ” ಎಂಬ ಕಾರ್ಯಚರಣೆಯ ಬಗ್ಗೆ ತನ್ನ reshma_bariga ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ‘ನನ್ನ ಮನೆಯ ದೀಪಕ್ಕೆ ಅವನ ಮನೆಯ ಹಣತೆಯ ತಂದೆ ಅಲ್ಲಿ ನಂದಿ ಹೋಯಿತು ಬೆಳಕು ಅವನ ಮನೆಯ ಬೆಳಕಿಗೆ ನನ್ನೊಳಗಿನ ದೀಪ… ಬೆಳಕಿನ ವಿಜೃಂಭಣೆಗಾಗಿ ಹೋರಾಟ ಜಯಿಸಿದ್ದು ಕತ್ತಲು… ಎಲ್ಲೆಲ್ಲೂ, ಕತ್ತಲು…! #dikkaraoperationsindura ಎಂದು ಪೋಸ್ಟ್ ಮಾಡಿ ನಮ್ಮದೇ ದೇಶ ಹಾಗೂ ದೇಶದ ಸೇನೆಯನ್ನು ವಿರೋಧಿಸಿ ಹಾಗೂ ಭಯೋತ್ಪಾಧನೆಯನ್ನು ಸಮರ್ಥಿಸುವಂತಹ ದೇಶವಿರೋಧಿ ವಿಚಾರವನ್ನು ತೋರಿಸಿದ್ದಾರೆ.


ನಮ್ಮ ಭಾವನೆಯಲ್ಲದೇ ದೇಶದ ಎಲ್ಲಾ ಪ್ರಜೆಗಳಿಗೆ ಧಕ್ಕೆಯಾಗುವಂತಹ ಕೃತವನ್ನು ಈಕೆಯು ಮಾಡಿರುತ್ತಾರೆ. ಈಕೆಯ ಈ ಸ್ಟೋರಿಯಿಂದ ಸಮಾಜದಲ್ಲಿ ಆಶಾಂತಿ ನಿರ್ಮಾಣವಾಗುವ ಸಾಧ್ಯತೆಯು ಕೂಡಾ ಇರುತ್ತದೆ ಹಾಗೂ ದೇಶದ ಒಳಗಿರುವ ದುಷ್ಟಶಕ್ತಿಗಳಿಗೆ ಪ್ರೇರಣೆ ಕೊಡುವಂತದು ಆಗಿರುತ್ತದೆ. ಈ ಪೋಸ್ಟ ಶೈಲಿ ಮತ್ತು ಭಾಷೆ ಬೇರೆಯವರ ಭಾವನೆಗಳನ್ನು ದ್ವೇಷದತ್ತ ಎಳೆದೊಯುವ ತೀವ್ರ ಶಕ್ತಿ ಹೊಂದಿದ್ದು, ಇದು ಸಮುದಾಯಗಳ ನಡುವೆ ಶತ್ರುತ್ವವನ್ನು ಹುಟ್ಟುಹಾಕುವಂತಾಗಿದೆ. ಈಕೆಯು ಹಾಕಿರುವ ಇನ್ಸ್ಟಾಗ್ರಾಂ ಸ್ಟೋರಿಯ “ಧಿಕ್ಕಾರ” ಎಂಬ ಶಬ್ದವು ತೀರಾ ಆವಮಾನಕಾರಿ ಆಗಿದ್ದು, “ಆಪರೇಷನ್ ಸಿಂಧೂರ” ಎಂಬ ಸೇನೆಯ ಕಾರ್ಯಾಚರಣೆಯು ಹಿಂಸಾತ್ಮಕ ಅಥವಾ ಸಂಘಟಿತ ದಾಳಿ ಎಂಬ ಅರ್ಥವನ್ನು ನೀಡುತ್ತದೆ. ಈ ಪೋಸ್ಟ್ ಅವಮಾನಕಾರಿ ಮತ್ತು ವ್ಯಕ್ತಿಗತ ಮಾನಹಾನಿಗೆ ಕಾರಣವಾಗಿದೆ, ಸಾಮಾಜಿಕ ಶಾಂತಿ ಮತ್ತು ಭದ್ರತೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ.

ಭಾವನಾತ್ಮಕವಾಗಿ ನೋವುಂಟುಮಾಡುವ ವಿಷಯವನ್ನು ಒಳಗೊಂಡಿದೆ. ಸಾಮಾಜಿಕ ಮೀಡಿಯಾದಲ್ಲಿ ದ್ವೇಷಭರಿತ ಅಭಿಯಾನಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇದೆ. ಇದು ಜನರಲ್ಲಿ ಅಶಾಂತಿಯನ್ನುಂಟು ಮಾಡುವ ಉದ್ದೇಶ ಹೊಂದಿದ್ದು, ಸಾರ್ವಜನಿಕರ ಭಾವನೆಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಇದರ ಮೂಲಕ ಸಾರ್ವಜನಿಕರ ಶಾಂತಿ ಹಾಗೂ ನೈತಿಕತೆಯ ಮೇಲೆ ಧಕ್ಕೆಯುಂಟಾಗಿ ಉದ್ರೇಕಕ್ಕೆ ಒಳಪಡಿಸಿ ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆಯನ್ನು ನೀಡಿರುವ ಪೋಸ್ಟ್ ಆಗಿರುತ್ತದೆ, ಅದರಿಂದ ರೇಷ್ಮಾ ಎನ್ ಬಾರಿಗ ಎಂಬವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿಯಾಗಿರುತ್ತದೆ.

