ನಾವೂರು:(ಮೇ.10) ಕಳೆದ ಕೆಲವು ದಿನಗಳ ಹಿಂದೆ ಪಹಲ್ಗಾಮ್ ನಲ್ಲಿ ನಡೆದ ಪಾಕಿಸ್ತಾನ ಪ್ರೇರಿತ ಪೈಶಾಚಿಕ ಕುಕೃತ್ಯಕ್ಕೆ ಭಾರತ ದೇಶ ಸಮರ್ಥವಾಗಿ ಇಡೀ ದೇಶವೇ ಹೆಮ್ಮೆ ಪಡುವ ರೀತಿಯಲ್ಲಿ ಪ್ರತ್ಯುತ್ತರವನ್ನು ನೀಡಲು ಆರಂಭಿಸಿದೆ.

ಇದನ್ನೂ ಓದಿ: ⭕Nelyadi: ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ!!
ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ಪ್ರಯುಕ್ತ ಹಾಗೂ ಈ ಸಂದರ್ಭದಲ್ಲಿ ನಾವೆಲ್ಲ ನಿಶ್ಚಿಂತೆಯಿಂದಿರಬೇಕಾದರೆ ಹಗಲಿರುಳು ನಮಗಾಗಿ ಅವಿರತವಾಗಿ ಕಾರ್ಯಪ್ರವತ್ತರಾಗಿರುವ ಸೈನ್ಯಕ್ಕೆ ಮತ್ತು ಸೈನಿಕರಿಗೆ ಶಕ್ತಿ ತುಂಬಲು ಭಗವಂತನ ಅನುಗ್ರಹವನ್ನು ಪ್ರಾರ್ಥಿಸುವ ಸಲುವಾಗಿ ನಾವೂರಿನ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಠಣ ಹಾಗೂ ವಿಶೇಷ ಪೂಜೆಯು ದೀಪ ಪ್ರಜ್ವಲನೆ ಮಾಡುವ ಮೂಲಕ ಮೇ.10 ರಂದು ನಡೆಯಿತು.

ಈ ಸಂದರ್ಭದಲ್ಲಿ ಲಕ್ಷ್ಮಿ ಇಂಡಸ್ಟ್ರೀಸ್ ಕನಸಿನ ಮನೆಯ ಮಾಲಕರಾದ ಕೆ.ಮೋಹನ್ ಕುಮಾರ್, ಡಾ. ಪ್ರದೀಪ್ ನಾವೂರು, ದಿನೇಶ್ ಕೋಟ್ಯಾನ್ , ಗುರುವಾಯನಕೆರೆ ಎಕ್ಸೆಲ್ ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಹಾಗೂ ಶ್ರೀ ಗೋಪಾಲಕೃಷ್ಣ ಸೇವಾ ಟ್ರಸ್ಟ್ (ರಿ.) ನ ಸರ್ವಸದಸ್ಯರು ಮತ್ತು ಊರವರು ಉಪಸ್ಥಿತರಿದ್ದರು.




