ಉಜಿರೆ:(ಮೇ.16) ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ರೋಗಿಯೊಬ್ಬರು ಗುಣಮುಖರಾಗಿದ್ದು, ಈ ಆಸ್ಪತ್ರೆಯ ವೈದ್ಯರು, ದಾದಿಯರು ಮತ್ತು ಎಲ್ಲಾ ವಿಭಾಗದ ಸಿಬ್ಬಂದಿಗಳ ಅತ್ಯುತ್ತಮ ಸೇವೆಯಿಂದ ಸಂತೃಪ್ತರಾಗಿ


ಇದನ್ನೂ ಓದಿ: 🟣ಉಜಿರೆ: ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ “ಶರಸೇತು ಬಂಧನ” ಹರಿಕಥೆ ಪ್ರಸ್ತುತಿ
ಇಲ್ಲಿನ ಇನ್ಶೂರೆನ್ಸ್ ವಿಭಾಗದಲ್ಲಿ ಕೇಕ್ ಕತ್ತರಿಸಿ ಸಿಬ್ಬಂದಿಗಳೊಂದಿಗೆ ಸಂಭ್ರಮಿಸುವ ಮೂಲಕ ತಮ್ಮ ಕೃತಜ್ಞತೆಯನ್ನು ಆಸ್ಪತ್ರೆಗೆ ತಿಳಿಸಿದರು.
ಹಳ್ಳಿ ಪ್ರದೇಶದಲ್ಲಿ ಆಸ್ಪತ್ರೆ ಇರುವುದರಿಂದ ಸಾಮಾನ್ಯವಾಗಿ ಒಂದು ಭಯ ಇರುತ್ತೆ, ಹೇಗಿರುತ್ತೆ ಚಿಕಿತ್ಸೆ, ಸೇವೆಗಳು ಹೇಗಿರುತ್ತೆ ಅನ್ನೋದು ಒಂದು ಪ್ರಶ್ನೆಯಾಗಿರುತ್ತೆ. ಆದರೆ , ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಟಾಪ್ ರೇಟೆಡ್ ಆಸ್ಪತ್ರೆ. ಅತ್ಯುತ್ತಮ ಸೇವೆ ಈ ಆಸ್ಪತ್ರೆಯಲ್ಲಿದೆ. ಆಸ್ಪತ್ರೆಯ ಡಾಕ್ಟರ್, ಸಿಬ್ಬಂದಿಗಳು ಅತ್ಯುತ್ತಮ ಸೇವೆಯನ್ನು ನೀಡಿದ್ದಾರೆ. ಪ್ರತ್ಯೇಕವಾಗಿ ಇನ್ಶೂರೆನ್ಸ್ ತಂಡ ಕೂಡ ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ಮಾಡಿಕೊಟ್ಟಿದ್ದಾರೆ. ಎಲ್ಲಾ ತಂಡ ಹಾಗೂ ಸಿಬ್ಬಂದಿಗಳಿಗೆ ನನ್ನ ಕೃತಜ್ಞತೆ ಎಂದು ಹೇಳಿದ್ದಾರೆ.
ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ಧನ್ ರವರು ಸಂತಸದ ಕ್ಷಣವನ್ನು ವ್ಯಕ್ತಪಡಿಸಿದರು.




ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ಧನ್, ಡಾ.ಅಶ್ವಿತ್, ಡಾ.ಐಶ್ವರ್ಯ ಶಾಸ್ತ್ರಿ ಹಾಗೂ ಇನ್ಶೂರೆನ್ಸ್ HOD ದಾಕ್ಷಾಯಿಣಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
