Mon. May 19th, 2025

Goa: ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಹಿಂದೂ ಧರ್ಮಕ್ಕಾಗಿ ಜೀವನವನ್ನು ಮುಡಿಪಾಗಿಟ್ಟು ಕಾರ್ಯ ನಿರ್ವಹಿಸುತ್ತಿರುವ 4 ಜನರಿಗೆ “ಹಿಂದೂ ರಾಷ್ಟ್ರರತ್ನ” ಮತ್ತು 20 ಜನರಿಗೆ “ಸನಾತನ ಧರ್ಮಶ್ರೀ” ಪುರಸ್ಕಾರ !

ಗೋವಾ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆನಗರ) – ಸನಾತನ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ‘ಸನಾತನ ರಾಷ್ಟ್ರ ಶಂಖನಾದ’ ಮಹೋತ್ಸವದಲ್ಲಿ ಹಿಂದೂ ಧರ್ಮಜಾಗೃತಿ ಮತ್ತು ರಾಷ್ಟ್ರರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಅವರ 83ನೇ ಜನ್ಮದಿನದ ನಿಮಿತ್ತ ಅವರ ಶುಭ ಹಸ್ತದಿಂದ 4 ಜನರಿಗೆ ‘ಹಿಂದೂ ರಾಷ್ಟ್ರರತ್ನ’ ಮತ್ತು 20 ಜನರಿಗೆ ‘ಸನಾತನ ಧರ್ಮಶ್ರೀ’ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ 23 ದೇಶಗಳ 20 ಸಾವಿರಕ್ಕೂ ಅಧಿಕ ಸಾಧಕರು ಮತ್ತು ಹಿಂದೂ ಧರ್ಮಪ್ರೇಮಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರ ವಂದನೀಯ ಉಪಸ್ಥಿತಿಯಿತ್ತು.

ಇದನ್ನೂ ಓದಿ: 🟣ಬೆಳ್ತಂಗಡಿ: ಬಾಂಜಾರು ಗುಡ್ಡಗಾಡು ಜನತೆಗೆ ಆರೋಗ್ಯ ಸೇವೆ ಒದಗಿಸಿದ ಮನ್ ಶರ್ ಪ್ಯಾರಾಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು

ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಮಾತನಾಡಿ, “ದೇಶದಲ್ಲಿ ವಿವಿಧ ಕ್ಷೇತ್ರಗಳ ಕಾರ್ಯಕರ್ತರಿಗೆ ‘ಪದ್ಮ’,‘ಪದ್ಮಭೂಷಣ’ ಮತ್ತು ‘ಪದ್ಮವಿಭೂಷಣ’ಪುರಸ್ಕಾರಗಳನ್ನು ನೀಡಲಾಗುತ್ತದೆ; ಆದರೆ ಹಿಂದೂ ಧರ್ಮಕ್ಕಾಗಿ ಜೀವನವನ್ನು ಮುಡಿಪಾಗಿಟ್ಟು ಕಾರ್ಯ ನಿರ್ವಹಿಸುವವರಿಗೆ ಈವರೆಗೆ ಯಾವುದೇ ಸನ್ಮಾನ ನೀಡಿಲ್ಲ. ಈ ಕೊರತೆಯನ್ನು ತುಂಬಲು ಸನಾತನ ಸಂಸ್ಥೆಯು ಈ ಪುರಸ್ಕಾರವನ್ನು ಆರಂಭಿಸಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಜನ್ಮದಿನದ ನಿಮಿತ್ತ ಪ್ರತಿ ವರ್ಷ ಈ ಪುರಸ್ಕಾರಗಳನ್ನು ನೀಡಲಾಗುವುದು”ಎಂದು ಹೇಳಿದರು.

ಕರ್ನಾಟಕದ ಪಂಚಶಿಲ್ಪಕಾರ ಪೂಜ್ಯ ಕಾಶೀನಾಥ ಕವಟೇಕರ್ ಇವರಿಗೆ ‘ಹಿಂದೂ ರಾಷ್ಟ್ರರತ್ನ’ ಪುರಸ್ಕಾರ

ಮುರ್ಡೇಶ್ವರದಲ್ಲಿರುವ ಶಿವನ ಪ್ರತಿಮೆಯು ವಿಶ್ವದ ಎರಡನೇ ಅತಿ ಎತ್ತರದ ಶಿವನ ಪ್ರತಿಮೆಯಾಗಿದ್ದು, ಇದನ್ನು ಪೂಜ್ಯ ಕಾಶೀನಾಥ ಕವಟೇಕರ್ ಅವರು ನಿರ್ಮಿಸಿದ್ದಾರೆ. ಇವರ ಶಿಲ್ಪಕಲೆಯನ್ನು ನೋಡಿ ಪರಮಪೂಜ್ಯ ಗುರುದೇವರ ಬ್ರಹ್ಮರಥೋತ್ಸವದ ರಥದ ನಿರ್ಮಾಣವನ್ನು ಇವರಿಗೆ ಮಾಡಲು ಕೊಡಲಾಗಿತ್ತು. ಎಲ್ಲಾ ಪುರಸ್ಕಾರಗಳಿಗಿಂತ ಉಚ್ಚ ಪುರಸ್ಕಾರವನ್ನು ಇವತ್ತು ಸನಾತನ ಸಂಸ್ಥೆ‌ ನನಗೆ ನೀಡಿ ಗೌರವಿಸಿದೆ ಎಂದು ಆನಂದವನ್ನು ಹಂಚಿಕೊಂಡರು.

ಉತ್ತರ ಪ್ರದೇಶದ ಆಚಾರ್ಯ ಗಣೇಶ್ವರ ಶಾಸ್ತ್ರಿ ದ್ರಾವಿಡ, ‘ಬಾಂಗ್ಲಾದೇಶ ಮೈನಾರಿಟಿ ವಾಚ್’ನ ಸಂಸ್ಥಾಪಕರಾದ ಪೂಜ್ಯ ನ್ಯಾಯವಾದಿ ರವೀಂದ್ರ ಘೋಷ್, ಮಹಾರಾಷ್ಟ್ರದ ಮುಂಬಯಿನ ಪ್ರಖ್ಯಾತ ಪ್ರವಚನಕಾರ ಡಾ. ಸಚ್ಚಿದಾನಂದ ಶೆವಡೆ ಅವರಿಗೂ ‘ಹಿಂದೂ ರಾಷ್ಟ್ರರತ್ನ’ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಕರ್ನಾಟಕದ ಶ್ರೀ. ಪ್ರಮೋದ ಮುತಾಲಿಕ್, ನ್ಯಾಯವಾದಿ ಅರುಣ್ ಶ್ಯಾಮ್, ಚಕ್ರವರ್ತಿ ಸೂಲಿಬೆಲೆ ಇವರಿಗೆ ‘ಸನಾತನ ಧರ್ಮಶ್ರೀ’ ಪುರಸ್ಕಾರ

ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಸಂಸ್ಥಾಪಕರಾದ ಶ್ರೀ. ಪ್ರಮೋದ ಮುತಾಲಿಕ್ ಇವರು ತಮ್ಮ ಮನೋಗತವನ್ನು ವ್ಯಕ್ತಪಡಿಸುತ್ತಾ, ನನಗೆ ಕೊಟ್ಟ ಪುರಸ್ಕಾರ ನನಗಲ್ಲ, ಲಕ್ಷಗಟ್ಟಲೆ ಹಿಂದುತ್ವಕ್ಕಾಗಿ ಕಾರ್ಯ ಮಾಡುವ ಹಿಂದೂ‌ ಕಾರ್ಯಕರ್ತರಿಗಾಗಿದೆ. ಇಂದಿನ ಶಂಖನಾದ ಮಹೋತ್ಸವವು ಮಹಾಯುದ್ಧದ ಶಂಖನಾದವಾಗಿದೆ. ಭಾರತದ ಒಳಗಿನ ಶತ್ರುಗಳಿಗೆ ಓಡಿಸಲು‌ ಮಾಡಿದ ಶಂಖನಾದವಾಗಿದೆ. ಶಾಸ್ತ್ರ ಮತ್ತು ಶಸ್ತ್ರದಿಂದ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಬೇಕಾಗಿದೆ ಎಂದರು.

ಕರ್ನಾಟಕದ ಮಾಜಿ ಹೆಚ್ಚುವರಿ ಮಹಾಧಿವಕ್ತ ನ್ಯಾಯವಾದಿ ಅರುಣ ಶ್ಯಾಮ್ ಇವರು ಸಮಾರಂಭದಲ್ಲಿ ಮಾತನಾಡುತ್ತಾ ಶಂಖನಾದ ಇವತ್ತಲ್ಲ 25 ವರ್ಷಗಳ ಹಿಂದೆಯೇ‌ ಮಾಡಲಾಗಿತ್ತು. ಗುರುಗಳ ಮಾರ್ಗದರ್ಶನದಿಂದ ಇಂತಹ ಆಪತ್ಕಾಲದಲ್ಲಿಯೂ ಸನಾತನ ಸಂಸ್ಥೆಯಂತಹ‌‌ ಸಂಘಟನೆಯ ನಿರ್ಮಾಣ ಮಾಡಲಾಗಿದೆ. ನಾವು ನ್ಯಾಯವಾದಿಗಳಾಗಿ ಕೇವಲ ‘Fees’ಗಾಗಿ ಅಲ್ಲದೇ ‘Peace’ಗಾಗಿ ಕಾರ್ಯ‌ ಮಾಡಬೇಕಾಗಿದೆ.” ಹಿಂದೂ ರಾಷ್ಟ್ರ ಶಂಖನಾದ 25 ವರ್ಷಗಳ ಹಿಂದೆ ಪ್ರಾರಂಭವಾಯಿತು. ಹಿಂದೂ ಧರ್ಮಕ್ಕಾಗಿ ಕೆಲಸ ಮಾಡುವುದು ನಮ್ಮ ಜವಾಬ್ದಾರಿ. ಶಂಖನಾದವನ್ನು ಜಗತ್ತಿನಾದ್ಯಂತ ತಲುಪಿಸಬೇಕು, ಇದೇ ಸಂದೇಶವನ್ನು ತೆಗೆದುಕೊಂಡು ಹೋಗಬೇಕು.”

ಕರ್ನಾಟಕದ ‘ಯುವ ಬ್ರಿಗೇಡ್’ನ ಸಂಸ್ಥಾಪಕರಾದ ಶ್ರೀ. ಚಕ್ರವರ್ತಿ ಸೂಲಿಬೆಲೆ ಇವರು ಮಾತನಾಡುತ್ತ ರಾಷ್ಟ್ರಕ್ಕೆ ಕವಿದಿರುವ ಮೋಡವನ್ನು ಸರಿಸಿ ಪುನಃ ಸನಾತನ ರಾಷ್ಟ್ರ ನಿರ್ಮಿತಿಯ ಕಾರ್ಯ ಈ ಮಹೋತ್ಸವದ ಮೂಲಕ ನಡೆಯುತ್ತಿದೆ ಎಂದರು.

ಹಾಗೆಯೇ ‘ಸನಾತನ ಧರ್ಮಶ್ರೀ’ ಪುರಸ್ಕಾರದಿಂದ ಸನ್ಮಾನಿತರಾದವರಲ್ಲಿ ಭಾಗ್ಯನಗರದ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಗ್, ದೆಹಲಿಯ ಕಾಶಿ-ಮಥುರಾ ದೇವಾಲಯಗಳ ವಿಮೋಚನೆಗಾಗಿ ಹೋರಾಡುತ್ತಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ್ ಜೈನ್, ಗೋವಾದ ವಿದ್ವಾನ್ ಆಚಾರ್ಯ ಯೋಗೇಶ್ವರ ಬೋರ್ಕರ್, ದೆಹಲಿಯ ‘ಸುದರ್ಶನ ವಾಹಿನಿ’ಯ ಪ್ರಧಾನ ಸಂಪಾದಕ ಡಾ. ಸುರೇಶ ಚವ್ಹಾಣ್ಕೆ, ಉತ್ತರ ಪ್ರದೇಶದ ‘ಪ್ರಾಚ್ಯಂ’ನ ಸಂಸ್ಥಾಪಕ ಕ್ಯಾಪ್ಟನ್ ಪ್ರವೀಣ್ ಚತುರ್ವೇದಿ, ತಮಿಳುನಾಡಿನ ‘ಹಿಂದೂ ಮಕ್ಕಲ್ ಕಚ್ಚಿ’ಯ ಸಂಸ್ಥಾಪಕ ಶ್ರೀ. ಅರ್ಜುನ್ ಸಂಪತ್, ದೆಹಲಿಯ ‘ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್’ನ ಶ್ರೀ. ಉದಯ ಮಾಹೂರ್ಕರ್, ಬೆಲ್ಜಿಯಂನ ಲೇಖಕ ಡಾ. ಕೋಯೆನ್‌ರಾಡ್ ಎಲ್ಸ್ಟ್, ಒಡಿಶಾದ ‘ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್’ನ ಶ್ರೀ. ಅನಿಲ್ ಕುಮಾರ್ ಧೀರ್, ದೆಹಲಿಯ ‘ಅಗ್ನಿ ಸಮಾಜ’ದ ಸಂಸ್ಥಾಪಕ ಶ್ರೀ. ಸಂಜೀವ ನೆವರ್, ದೆಹಲಿಯ ‘ಸರಯು ಟ್ರಸ್ಟ್’ನ ಸಂಸ್ಥಾಪಕ ಶ್ರೀ. ರಾಹುಲ್ ದಿವಾನ್, ಹರಿಯಾಣದ ಚಿಂತಕ ಶ್ರೀ. ನೀರಜ್ ಅತ್ರಿ, ಇಂಡೋನೇಷ್ಯಾ-ಬಾಲಿಯ ‘ಧರ್ಮಸ್ಥಾಪನಂ’ ಫೌಂಡೇಶನ್‌ನ ರಸ ಆಚಾರ್ಯ ಪೂಜ್ಯ ಧರ್ಮಯಶ ಜೀ ಮಹಾರಾಜ್ ಮತ್ತು ಛತ್ತೀಸಗಢದ ಶ್ರೀ. ಪ್ರಬಲ ಪ್ರತಾಪ್ ಸಿಂಗ್ ಜು ದೇವ್ ಅವರು ಸೇರಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು