Fri. May 23rd, 2025

Belthangady: ಬೆಳ್ತಂಗಡಿ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯ ಸನ್ನಿಧಿ ಎಸ್ ಹೆಗ್ಡೆ ಹಾಗೂ ದಿಯಾ ಎಸ್ ಎಸ್ ಎಲ್ ಸಿ ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ 7ನೇ ಸ್ಥಾನ

ಗಡಿ, (ಮೇ.23): ಎಸ್ ಎಸ್ ಎಲ್ ಸಿ ಮರುಮೌಲ್ಯಮಾಪನದಲ್ಲಿ ಇಲ್ಲಿನ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯ ಸನ್ನಿಧಿ ಎಸ್ ಹೆಗ್ಡೆ ಹೆಚ್ಚುವರಿ 1 ಅಂಕ ಮತ್ತು ದಿಯಾ ಹೆಚ್ಚುವರಿ 9 ಅಂಕ ಪಡೆದು 619 ಅಂಕ ಗಳಿಸಿ ರಾಜ್ಯಕ್ಕೆ 7ನೇ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: 🔴ಬೆಳ್ತಂಗಡಿ: ಕರಾಯ ಶ್ರೀ ಕೃಷ್ಣ ಭಜನಾಮಂದಿರದಲ್ಲಿ ಕುಣಿತ ಭಜನಾ ತರಬೇತಿ ಉದ್ಘಾಟನೆ

ಪರೀಕ್ಷೆಗೆ ಹಾಜರಾದ 52 ವಿದ್ಯಾರ್ಥಿಗಳಲ್ಲಿ 26 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 25 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಓರ್ವ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯು ಸತತ 10 ವರ್ಷಗಳಿಂದ ಎಸ್ ಎಸ್ ಎಲ್ ಸಿ ಯಲ್ಲಿ ಶೇ.100 ಫಲಿತಾಂಶ ಗಳಿಸಿ ಅಮೋಘ ಸಾಧನೆಯನ್ನು ಮಾಡಿ ಮೌಲ್ಯಾಧಾರಿತ ಹಾಗೂ ಗುಣಮಟ್ಟದ ಶಿಕ್ಷಣ ನೀಡುತ್ತಿದೆ‌.

Leave a Reply

Your email address will not be published. Required fields are marked *