Sun. Jul 27th, 2025

Bengaluru : ಕಂಡ ಕಂಡ ಹೆಣ್ಮಕ್ಕಳಿಗೆ ಮುತ್ತಿಟ್ಟು ಎಸ್ಕೇಪ್ ಆಗುತ್ತಿದ್ದ ಮುತ್ತುರಾಜ ಕೊನೆಗೂ ಲಾಕ್..!‌

ಬೆಂಗಳೂರು, (ಜೂನ್ 10): ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಸಂಜೆ ವೇಳೆ ವಾಕಿಂಗ್ ಮಾಡುತ್ತಿದ್ದ ಇಬ್ಬರು ಪ್ರತ್ಯೇಕ ಮಹಿಳೆಯರನ್ನು ಸಾರ್ವಜನಿಕ ಸ್ಥಳದಲ್ಲಿಯೇ ಗಟ್ಟಿಯಾಗಿ ತಬ್ಬಿಕೊಂಡು ತುಟಿಗೆ ಮುತ್ತಿಡುವ ಮೂಲಕ ತನ್ನ ಕಾಮಚೇಷ್ಟೆ ಮೆರೆದಿದ್ದವ ಸಿಕ್ಕಿಬಿದ್ದಿದ್ದಾನೆ. ಒಬ್ಬಂಟಿ ಮಹಿಳೆಯರನ್ನು ಬಲವಂತವಾಗಿ ತಬ್ಬಿಕೊಂಡು ಮುತ್ತಿಡುವ ಕಾಮುಕನ ಹೆಸರು ಮದನ್. ಬೆಂಗಳೂರು ನಗರದ ವಿವಿಧ ಉದ್ಯಾನಗಳು, ಸಣ್ಣ ಪಾರ್ಕ್‌ಗಳು, ಮೈದಾನಗಳು ಸೇರಿದಂತೆ ಮಹಿಳೆಯರು ವಾಯು ವಿಹಾರ ಮಾಡುವ ಪ್ರಮುಖ ರಸ್ತೆಗಳನ್ನು ಈ ಕಾಮುಕನ ಅಟ್ಟಹಾಸ ಮಿತಿ ಮೀರಿತ್ತು. ಪುಲಕೇಶಿ ನಗರದಲ್ಲಿ ಇಬ್ಬರು ಮಹಿಳೆಯರಿಗೆ ಮುತ್ತುಕೊಟ್ಟು ದೌರ್ಜನ್ಯ ಎಸಗಿದ್ದ, ಮೊಮೋಸ್ ಅಂಗಡಿ ಬಳಿ ನಿಂತಿದ್ದ ಯುವತಿಯ ತುಟಿಗೆ ಮುತ್ತಿಟ್ಟು ಅಲ್ಲಿಂದ ಎಸ್ಕೇಪ್ ಆಗಿದ್ದ ಕಾಮುಕ ಮದನ್, ಅದೇ ದಿನ ಪಾರ್ಕ್ ನಲ್ಲಿ ಮಹಿಳೆ ಓರ್ವರನ್ನು ಹಿಂಬಾಲಿಸಿ ಆಕೆಗೂ ಮುತ್ತಿಟ್ಟು ತಬ್ಬಿಕೊಂಡಿದ್ದ. ಈ ಸಂಬಂಧ ಪುಲಕೇಶಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇದನ್ನೂ ಓದಿ: ⭕Raha Kapoor: ಎರಡು ವರ್ಷ ವಯಸ್ಸಿಗೆ ರಾಹಾ ನ ಆಸ್ತಿ ಎಷ್ಟು ಗೊತ್ತಾ..?

ಜೂನ್ 6 ರಂದು ವಾಯು ವಿಹಾರಕ್ಕೆ ಕುಟುಂಬದೊಂದಿಗೆ ಬಂದಿದ್ದ ಮಹಿಳೆಯೊಬ್ಬರ ಬಳಿ ಬಂದು ತಬ್ಬಿಕೊಂಡು ಬಲವಂತವಾಗಿ ತುಟಿಗೆ ಮುತ್ತು ಕೊಟ್ಟಿದ್ದ. ಬಳಿಕ ಇದೇ ಪಾರ್ಕ್‌ನಲ್ಲಿ ವಾಕಿಂಗ್ ಮಾಡುತ್ತಿದ್ದ ಇನ್ನೊಬ್ಬ ಮಹಿಳೆಯನ್ನೂ ತಬ್ಬಿ ಮುತ್ತು ಕೊಟ್ಟಿದ್ದಾನೆ. ಈ ಸಂಬಂಧ ಮಹಿಳೆ, ಪುಲಕೇಶಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿ ಮೇರೆಗೆ ಪೊಲೀಸರು ಕಾಮುಕ ಮದನ್​ ಗಾಗಿ ಹುಡುಕಾಟ ನಡೆಸುತ್ತಿದ್ದಾಗ ಬಾಣಸವಾಡಿಯಲ್ಲಿ ಸಿಕ್ಕಿಬಿದ್ದಿದ್ದಾನೆ.

ಸದ್ಯ ಪುಲಕೇಶಿ ನಗರ ಪೊಲೀಸರು, ಕಾಮುಕ ಮದನ್​ ನನ್ನು ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಮದನ್ ಅತಿಹೆಚ್ಚು ಅಶ್ಲೀಲ ನೋಡುತ್ತಿದ್ದ. ಬಳಿಕ ರಸ್ತೆಯಲ್ಲಿ ಬಂದು ಮಹಿಳೆಯರ ಮೇಲೆ ಎರಗುತ್ತಿದ್ದ ಎನ್ನುವುದು ಗೊತ್ತಾಗಿದೆ. ಇನ್ನು ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮದನ್, ಕೆಲ ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ ಎಂದು ತಿಳಿದುಬಂದಿದೆ.

ಇನ್ನು ಈ ಬಗ್ಗೆ ಪೂರ್ವ ವಿಭಾಗ ಡಿಸಿಪಿ ದೇವರಾಜ್ ಪ್ರತಿಕ್ರಿಯಿಸಿದ್ದು, ಇದೇ ಜೂನ್ 6ರಂದು ಸಂಜೆ 112 ಗೆ ಒಂದು ಫೋನ್ ಬಂದಿತ್ತು ಸ್ಥಳಕ್ಕೆ ಹೋದಾಗ ಮಹಿಳೆಯರೊಂದಿಗೆ ಅಸಭ್ಯ ವರ್ತನೆ ತೋರಿದ್ದು ಕಂಡುಬಂದಿದೆ. ಸ್ಥಳದಲ್ಲಿ ಇನ್ನೂ ಕೆಲ ಮಹಿಳೆಯರಿಗೆ ಈ ರೀತಿ ಆಗಿರುವುದು ತಿಳಿದುಬಂದಿತ್ತು. ನಂತರ ಆರೇಳು ಕಿ.ಮೀ. ಸಿಸಿಟಿವಿ ಪರಿಶೀಲನೆ ಮಾಡಿ 37 ವರ್ಷದ ಮದನ್ ಎಂಬಾತನನ್ನು ಬಂಧನ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಗ್ರ್ಯಾಜುಯೇಟ್ ಆಗಿರುವ ಆರೋಪಿ ಬಾಣಸವಾಡಿ ಬಳಿ ವಾಸವಾಗಿದ್ದಾನೆ. ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಇತ್ತೀಚೆಗೆ ಕೆಲಸ ಬಿಟ್ಟಿದ್ದ. ತನಿಖೆ ವೇಳೆ ಮೂರ್ನಾಲ್ಕು ಠಾಣಾ ವ್ಯಾಪ್ತಿಯಲ್ಲಿ ಈ ರೀತಿ ಮಾಡಿರುವುದಾಗಿ ಹೇಳಿದ್ದಾನೆ. ಹೆಣ್ಣೂರು,ಬಾಣಸವಾಡಿ,ರಾಮಮೂರ್ತಿ ಭಾಗದಲ್ಲಿ ಕೃತ್ಯ ಎಸಗಿದ್ದಾನೆ. ಆರೋಪಿಗೆ ಮದುವೆ ಆಗಿದೆ ಎನ್ನಲಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಈ ರೀತಿಯ ಹಲವು ಕೃತ್ಯಗಳು ನಡೆಯುತ್ತಿವೆ. ಕೆಲವೆಡೆ ಲೈಂಗಿಕವಾಗಿ ಹಿಂದೆ, ದೌರ್ಜನ್ಯಗಳು ನಡೆದರೆ, ಬಲವಂತವಾಗಿ ಎತ್ತಿಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆಗಳೂ ನಡೆದಿವೆ. ಕೆ.ಆರ್. ಮಾರುಕಟ್ಟೆ, ಕೆ.ಆರ್.ಪುರದ ಬಳಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಘಟನೆಗಳು ವರದಿ ಆಗಿದ್ದವು. ನಂತರ, ಬೈಕ್‌ನಲ್ಲಿ ಡ್ರಾಪ್ ಕೇಳಿದ ಯುವತಿ ಮೇಲೆ ಅತ್ಯಾಚಾರ ಯತ್ನ ನಡೆದಿತ್ತು. ಅಲ್ಲದೇ ಇತ್ತೀಚೆಗೆ ಯುವತಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾಮುಕನೊಬ್ಬ ಬಂದು ಆಕೆಯ ಎದೆಭಾಗವನ್ನು ಮುಟ್ಟಿ ಎಸ್ಕೇಪ್ ಆಗಿದ್ದ. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.

Leave a Reply

Your email address will not be published. Required fields are marked *