Sat. Jun 14th, 2025

Ahmedabad plane crash: ಲಕ್ಕಿ ನಂಬರೇ ಅನ್​ಲಕ್ಕಿಯಾಯ್ತು! ವಿಜಯ್ ರೂಪಾನಿ ನಂಬಿದ್ದ ಲಕ್ಕಿ ನಂಬರ್ ‌ ಯಾವುದು ಗೊತ್ತಾ..?

ಅಹಮದಾಬಾದ್(ಜೂ.13): ಅಹಮದಾಬಾದ್ ವಿಮಾನ ಪತನ ದುರಂತ ಇಡೀ ದೇಶವನ್ನೇ ಆಘಾತಕ್ಕೊಳಗಾಗಿಸಿದೆ. ಈ ವಿಮಾನ ಅಪಘಾತದಲ್ಲಿ 265 ಜನ ಮೃತಪಟ್ಟಿದ್ದು, ಇದರಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಸೇರಿದ್ದಾರೆ. ಅವರು ಪತ್ನಿ ಅಂಜಲಿ ಮತ್ತು ಮಗಳನ್ನು ಭೇಟಿಯಾಗಲು ಲಂಡನ್​ಗೆ ತೆರಳುತ್ತಿದ್ದರು.

https://youtube.com/shorts/x4IB1jLpr90?feature=share

ವಿಜಯ್ ರೂಪಾನಿ ಅವರ ಸಾವಿನ ದಿನಾಂಕದ ಬಗ್ಗೆ ಇದೀಗ ಅಚ್ಚರಿಯ ಅಂಶವೊಂದು ಬೆಳಕಿಗೆ ಬಂದಿದೆ. ಜೀವನದುದ್ದಕ್ಕೂ ಅದೃಷ್ಟ ಎಂದೇ ಅವರು ಭಾವಿಸಿಕೊಂಡು ಬಂದಿದ್ದ ಆ ಸಂಖ್ಯೆಯೇ ಅವರಿಗೆ ಮುಳುವಾಗಿದೆ. ಅಷ್ಟೇ ಅಲ್ಲ, ಅವರ ಸಾವಿನ ದಿನಾಂಕವಾಗಿ ಮಾರ್ಪಟ್ಟಿದೆ!ವಿಜಯ್ ರೂಪಾನಿಗೆ 1206 ಎಂಬುದು ಕೇವಲ ಒಂದು ಸಂಖ್ಯೆಯಾಗಿರಲಿಲ್ಲ.

ಬದಲಿಗೆ, ನಂಬಿಕೆಯ ಸಂಕೇತವಾಗಿತ್ತು. ಅದನ್ನು ಅವರು ಅದೃಷ್ಟವೆಂದೇ ಭಾವಿಸಿದ್ದರು. ವಿಜಯ್ ರೂಪಾನಿ ಈ ಸಂಖ್ಯೆಯನ್ನು ಎಷ್ಟರ ಮಟ್ಟಿಗೆ ಅದೃಷ್ಟವೆಂದು ಪರಿಗಣಿಸಿದ್ದರು ಎಂದರೆ, ತಾವು ಖರೀದಿ ಮಾಡಿದ ಮೊದಲ ಸ್ಕೂಟರ್‌ನಿಂದ ಕಾರಿನವರೆಗೆ ಎಲ್ಲಾ ವಾಹನಗಳ ಸಂಖ್ಯೆ 1206 ರಿಂದಲೇ ಪ್ರಾರಂಭವಾಗುವಂತಿತ್ತು. ಆದರೆ ಅದೇ ಸಂಖ್ಯೆ ಅವರಿಗೆ ಅಶುಭಕರವಾಗಿ ಪರಿಣಮಿಸಿತು. 1206 (ದಿನಾಂಕ 12-6-25) ರಂದು ಅವರು ಪ್ರಾಣವನ್ನೇ ಕಳೆದುಕೊಂಡರು.

ರೂಪಾನಿ ಅವರ ಅದೃಷ್ಟ ಸಂಖ್ಯೆ 1206 ಅವರಿಗೆ ಮಾತ್ರವಲ್ಲದೆ ಅವರ ಕುಟುಂಬಕ್ಕೂ ದುರದೃಷ್ಟಕರವೆಂಬುದು ಜೂನ್ 12, ಅಂದರೆ 12-06 ರಂದು ಸಾಬೀತಾಯಿತು. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ವಿಜಯ್ ರೂಪಾನಿ ಅವರ ಸ್ಕೂಟರ್ ಮತ್ತು ಮೊದಲ ಕಾರು 1206 ನೋಂದಣಿ ಸಂಖ್ಯೆಯನ್ನು ಹೊಂದಿವೆ. ಈ ಕಾರು ಮತ್ತು ಸ್ಕೂಟರ್ ಈಗಲೂ ಅವರ ಮನೆಯ ಪಾರ್ಕಿಂಗ್ ಜಾಗದಲ್ಲಿವೆ.

Leave a Reply

Your email address will not be published. Required fields are marked *