Sat. Aug 2nd, 2025

Ullal: 12 ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಮೃತ್ಯು

ಉಳ್ಳಾಲ:(ಜೂ.13) ಸಿಲಿಕೋನಿಯಾ ವಸತಿ ಸಂಕೀರ್ಣದ 12 ನೇ ಮಹಡಿಯಿಂದ ಬಿದ್ದು ಬಾಲಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತಾರ್ ನಲ್ಲಿ ಜೂ.12ರ ಗುರುವಾರ ತಡರಾತ್ರಿ ಸಂಭವಿಸಿದೆ.

ಇದನ್ನೂ ಓದಿ: 🥲2 ದಿನದ ಹಿಂದೆ ಕೆಲಸಕ್ಕೆ ರಿಸೈನ್‌, ಲಂಡನ್‌‌ನಲ್ಲಿ ಸೆಟಲ್‌ ಆಗೋ ಕನಸು!

ಯೆನೆಪೋಯ ವೈದ್ಯಕೀಯ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ವೈದ್ಯ ದಂಪತಿ ಡಾ. ಮಮ್ತಾಝ್ ಅಹ್ಮದ್ ಮತ್ತು ಡಾ. ಕಮ್ರಾಜ್ ದಂಪತಿ ಪುತ್ರಿ ಹಿಬಾ ಐಮನ್ (15) ಸಾವನ್ನಪ್ಪಿರುವ ಬಾಲಕಿ.

18ನೇ ಮಹಡಿ ಹೊಂದಿರುವ ಸಿಲಿಕೋನಿಯಾ ವಸತಿ ಸಂಕೀರ್ಣದ 12 ಮಹಡಿಯಲ್ಲಿ ವೈದ್ಯ ದಂಪತಿ ವಾಸವಿದ್ದರು. ರಾತ್ರಿ ವೈದ್ಯ ದಂಪತಿಗಳಿಬ್ಬರು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹಿಬಾ ಬಾಲ್ಕನಿಯಲ್ಲಿ ಸ್ಟೂಲ್ ಇಟ್ಟು ಬೆಡ್ ಶೀಟ್ ಒಣಗಿಸಲು ಯತ್ನಿಸುತ್ತಿದ್ದಾಗ ಮೇಲಿಂದ ಕೆಳ ಬಿದ್ದು ಸಾವನ್ನಪ್ಪಿದ್ದಾಳೆ.

ಯೆನೆಪೋಯ ಶಾಲೆಯಲ್ಲಿ 10ನೇ ತರಗತಿಯಲ್ಲಿ ಹಿಬಾ ವಿದ್ಯಾರ್ಥಿನಿಯಾಗಿದ್ದಳು. ಉಳ್ಳಾಲ ಠಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *