Mon. Jun 16th, 2025

Ujire:(ಜೂ.22) ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಜನರಲ್‌ ಸರ್ಜರಿ ತಪಾಸಣಾ ಶಿಬಿರ

ಉಜಿರೆ:(ಜೂ.16) ಪರಮಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಹೇಮಾವತಿ ವೀ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ಉಚಿತ ಜನರಲ್‌ ಸರ್ಜರಿ ತಪಾಸಣಾ ಶಿಬಿರವು ಜೂನ್. 22‌ ರಂದು ಬೆಳಗ್ಗೆ 9:00ರಿಂದ ಮಧ್ಯಾಹ್ನ 1.00ರ ವರೆಗೆ ಉಜಿರೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆಯಲಿದೆ.

ಶಿಬಿರದಲ್ಲಿ ವೈದ್ಯರ ಸಮಾಲೋಚನೆ ಉಚಿತವಾಗಿದ್ದು, 10% ರಿಯಾಯಿತಿ ದರದಲ್ಲಿ ಔಷಧ, ಒಳರೋಗಿ ವಿಭಾಗದ ಶುಲ್ಕದಲ್ಲಿ 20% ರಿಯಾಯಿತಿ, ಲ್ಯಾಬ್ & ರೇಡಿಯಾಲಜಿ ಪರೀಕ್ಷೆಯಲ್ಲಿ 20% ರಿಯಾಯಿತಿ ದೊರೆಯಲಿದೆ.

ಉಚಿತ ತಪಾಸಣೆಗಳು:

  • ಸಾಮಾನ್ಯ ಶಸ್ತ್ರಚಿಕಿತ್ಸಾ ತಪಾಸಣೆ
  • ಹರ್ನಿಯಾ(ಕಿಬ್ಬೊಟ್ಟೆ, ತೊಡೆಸಂದು, ಹೊಕ್ಕಳು) ಕಡಿಮೆ ಮಾಡಬಹುದಾದ ಊತ
  • ಪಿತ್ತಕೋಶದ ಕಲ್ಲುಗಳು(ಕಿಬ್ಬೊಟ್ಟೆಯ ನೋವು , ಕಾಮಾಲೆ)
  • ಅಪೆಂಡಿಸೈಟಿಸ್(ಕೆಳಗಿನ ಬಲ ಹೊಟ್ಟೆ ನೋವು)
  • ಮೂಲವ್ಯಾಧಿ
  • ಪಿಸ್ತುಲಾ
  • ವೃಷಣಗಳ ನೋವು ರಹಿತ ಊತ
  • ಚರ್ಮದ ಗಾಯಗಳು(ಗೆಡ್ಡೆಗಳು)

ಶಿಬಿರದಲ್ಲಿ ತಜ್ಞ ವೈದ್ಯರಾದ, ಡಾ.ಬಾಲಾಜಿ‌ ಪ್ರಭಾಕರನ್ , MBBS MS, ಜನರಲ್‌ ಸರ್ಜನ್ , ಡಾ.ಕಿರಣ್‌ ಕುಮಾರ್‌, MBBS MS, ಜನರಲ್‌ ಸರ್ಜನ್ ಪಾಲ್ಗೊಳ್ಳಲಿದ್ದಾರೆ.

ಹೆಸರು ನೋಂದಾಯಿಸಲು ಸಂಪರ್ಕಿಸಿ: 7760397878/ 8073349216

Leave a Reply

Your email address will not be published. Required fields are marked *