ಬೆಳ್ತಂಗಡಿ:(ಜೂ.17) ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಹೊಸದಾಗಿ ತರಬೇತಿಗೊಂಡು ಆಗಮಿಸಿದ ಸ್ಕೌಟ್ಸ್ ಗೈಡ್ ಶಿಕ್ಷಕರಿಗೆ ಚೈತನ್ಯ ತುಂಬುವ ಚೇತರಿಕಾ ಶಿಬಿರ ನಡೆಯಿತು.

ಇದನ್ನೂ ಓದಿ: 🟣ಬಂದಾರು : ವಿಪರೀತ ಮಳೆಗೆ ಗುಡ್ಡ ಕುಸಿದು ಮನೆಗೆ ಹಾನಿ
ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಮುರಳಿಧರ್ ಆಗಮಿಸಿ ಶಿಕ್ಷಕರಿಗೆ ಸ್ಕಾರ್ಫ್ ತೊಡಿಸಿ, ಪ್ರತಿಜ್ಞಾವಿಧಿಯನ್ನು ವಾಚಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಇನ್ಸ್ಪೆಕ್ಟರ್ ಮುರುಳಿಧರ್ ರವರು ಮಾತನಾಡಿ ಸ್ಕೌಟ್ ಗೈಡ್ ನ ಮಹತ್ವ ಸಮಾಜಕ್ಕೆ ಒಂದು ಮಾದರಿ ಹಾಗೆಯೇ ಮಕ್ಕಳು ಶಿಸ್ತು, ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬಹುದು ಎಂಬುದನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್ ಉಪಸ್ಥಿತರಿದ್ದರು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿಕ್ಷಕರಿಗೆ ಅಭಿನಂದನೆಯನ್ನು ತಿಳಿಸಿದರು. ಸ್ಕೌಟ್ ಮಾಸ್ಟರ್ ಗಳಾದ ಮಂಜುನಾಥ್, ಜಯರಾಮ್, ಶ್ರೀಮತಿ ರಮ್ಯ ,ಶ್ರೀಮತಿ ಗೀತಾ ಪಿ, ಕಬ್ ಮಾಸ್ಟರ್ ಗಳಾದ ಶ್ರೀಮತಿ ನೀತಾ ಕೆ ಎಸ್, ಶ್ರೀಮತಿ ಜಯಲಕ್ಷ್ಮಿ,
ಪ್ಲಾಕ್ ಲೀಡರ್ ಪ್ರಮೀಳಾ ಉಪಸ್ಥಿತರಿದ್ದರು. ಕಬ್ ಬುಲ್ ಬುಲ್, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು ನಿರೂಪಣೆಯನ್ನು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಪ್ರಮೀಳಾ ಪೂಜಾರಿ ನೆರವೇರಿಸಿ ಕೊಟ್ಟರು.



