ಉಜಿರೆ:(ಜೂ.24) ವ್ಯಾಯಾಮ್ ಫಿಟ್ನೆಸ್ & ಕ್ರಾಸ್ ಫಿಟ್, ಉಜಿರೆ ಇದರ ನೇತೃತ್ವದಲ್ಲಿ , ಕಾಶಿ ಪ್ಯಾಲೇಸ್ ದಿ ಓಶಿಯನ್ ಪರ್ಲ್ ಉಜಿರೆ, ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಇಂದಿರಾನಗರ ಬೆಂಗಳೂರು, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ (ರಿ.), ರಾಜಾರಾಂ ಏಜೆನ್ಸಿಸ್, ಬೆಳ್ತಂಗಡಿ, ಎಸ್.ಡಿ.ಎಂ.ಇ. ಸೊಸೈಟಿ ಉಜಿರೆ, ಎಸ್.ಡಿ.ಎಂ. ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಉಜಿರೆ, ಸಂಧ್ಯಾ ಫ್ರೆಶ್ ಉಜಿರೆ । ಎಂ.ಡಬ್ಲ್ಯು.ಬಿ. ಗ್ರೂಪ್ ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಪುತ್ತೂರು, ಬೆಳ್ತಂಗಡಿ ತಾಲೂಕು ಪ್ರೆಸ್ ಕ್ಲಬ್ (ರಿ.) ಸಿಇಎನ್ ಪೊಲೀಸ್ ಠಾಣೆ, ಮಂಗಳೂರು, ದ.ಕ. ಇವರ ಸಹಯೋಗದಲ್ಲಿ ವ್ಯಸನ ಮುಕ್ತ ಭಾರತಕ್ಕಾಗಿ ಓಟ ಎಂಬ ಸ್ಲೋಗನ್‌ದೊಂದಿಗೆ ಜರುಗಲಿರುವ ರೈನಾಥೋನ್ 2025 ಕುರಿತಾಗಿ ಉಜಿರೆಯ ವ್ಯಾಯಾಮ್ ಜಿಮ್‌ನಲ್ಲಿ ಪತ್ರಿಕಾಗೋಷ್ಠಿ ಜೂ.24 ರಂದು ಜರುಗಿತು.

ಇದನ್ನೂ ಓದಿ: ⭕ಕನ್ಯಾಡಿ: ಕನ್ಯಾಡಿ ನಿವಾಸಿ ಶಿವರಾಜ್ ಮತ್ತಿಲ ಆತ್ಮಹತ್ಯೆ
ಈ ಸಂದರ್ಭದಲ್ಲಿ ಮಾತನಾಡಿದ ರೋಟರಿಯನ್ ಸಂದೇಶ್ ರಾವ್, “ಮಳೆಯ ಜೊತೆಯಲ್ಲಿಯೇ ಓಡುವ ಈ ವಿಶೇಷ ಅನುಭವದ ಮೂಲಕ ಆರೋಗ್ಯದ ಮಹತ್ವವನ್ನೂ, ವ್ಯಸನ ವಿರೋಧಿ ಸಂದೇಶವನ್ನೂ ಯುವಜನತೆ ಕಡೆಗೆ ತಲುಪಿಸಲು ಉದ್ದೇಶಿಸಲಾಗಿದೆ” ಎಂದು ಅಭಿಪ್ರಾಯಪಟ್ಟರು.
ಜೂನ್ 29, ಆದಿತ್ಯವಾರ ಬೆಳಿಗ್ಗೆ 7:30 ಕ್ಕೆ ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಮ್ಯಾರಥಾನ್ ಕಾರ್ಯಕ್ರಮಕ್ಕೆ ಎಲ್ಲರ ಸಹಭಾಗಿತ್ವಕ್ಕೆ ಆಹ್ವಾನ ನೀಡಲಾಯಿತು.


ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಆಯೋಜಕರಾದ ಪ್ರವೀಣ್ ಗೋರೆ, ಕೆ. ಮೋಹನ್ ಕುಮಾರ್, ವ್ಯಾಯಾಮ್ ಜಿಮ್ ಮಾಲೀಕರಾದ ಶಿಶಿರ್ ರಘುಚಂದ್ರ, ಅನೂಪ್ ಜೈನ್, ಓಷಿಯನ್ ಪರ್ಲ್ ಉಜಿರೆಯ ಉದಯ ಶೆಟ್ಟಿ, ಆದರ್ಶ್ ಕಾರಂತ್ ಹಾಗೂ ಸ್ಪಾನ್ಸರ್ ರೋಟರಿಯನ್ ಸಂದೇಶ್ ರಾವ್ ಉಪಸ್ಥಿತರಿದ್ದರು.
ಈ ವೇಳೆ ರೈನಾಥೋನ್ 2025 ಜರ್ಸಿಯನ್ನು ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ರಾಜಾರಾಂ ಮತ್ತು ಸಂಧ್ಯಾ ಫ್ರೆಶ್ ಹಾಗೂ “ಬದುಕು ಕಟ್ಟೋಣ ಬನ್ನಿ” ಸಂಸ್ಥೆಗಳು ಸಹಯೋಗ ಹಾಗೂ ಪ್ರಾಯೋಜಕತ್ವ ನೀಡಿದ್ದಾರೆ.

