ಉಜಿರೆ:(ಜು.2) ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆಯನ್ನು ಜು.೧ ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ವೈದ್ಯರ ಸೇವೆ ಮತ್ತು ತ್ಯಾಗ ಅಮೂಲ್ಯವಾದದ್ದು, ರೋಗಿಗಳ ಸೇವೆಗಾಗಿ ತನ್ನ ಹೆಚ್ಚಿನ ಸಮಯವನ್ನು ಮುಡಿಪಾಗಿಡುವ ವೈದ್ಯರದ್ದು ಒತ್ತಡದ ಜೀವನ. ಇಂತಹ ಗ್ರಾಮೀಣ ಪ್ರದೇಶದ ಆಸ್ಪತ್ರೆಯಲ್ಲಿ ವೈದ್ಯಕೀಯ ವೃತ್ತಿ ಮಾಡುತ್ತಾ, ರೋಗಿಗಳ ಸೇವೆಯ ವಿಷಯ ಬಂದಾಗ ಎಲ್ಲರು ಒಗ್ಗಟ್ಟಿನಿಂದ ರೋಗಿಯ ಸೇವೆಗೆ ಮುಂದಾಗುವ ನಮ್ಮ ಆಸ್ಪತ್ರೆಯ ವೈದ್ಯರ ಸೇವೆ ನಿಜವಾಗಿಯೂ ಶ್ಲಾಘನೀಯ ಎಂದರು.

ಇದನ್ನೂ ಓದಿ: 🟢ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ವತಿಯಿಂದ ಸಮಾಲೋಚನಾ ಸಭೆ
ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಅಮ್ಮನವರ ಆಶೀರ್ವಾದ ಮತ್ತು ಆದೇಶದಂತೆ, ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯ ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಮ್ಮ ಆಸ್ಪತ್ರೆಯ ವೈದ್ಯಕೀಯ ತಂಡ ಅತ್ಯುತ್ತಮ ವೈದ್ಯಕೀಯ ಸೇವೆ ನೀಡುತ್ತಿದ್ದು, ಸ್ವತಃ ರೋಗಿಗಳೇ ವೈದ್ಯರ ಮತ್ತು ಆಸ್ಪತ್ರೆಯ ಸೇವೆಯನ್ನು ಶ್ಲಾಘಿಸುತ್ತಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಶೀಘ್ರದಲ್ಲಿ ಎಂ.ಆರ್.ಐ ಸ್ಕ್ಯಾನಿಂಗ್ ಸೇವೆ ದೊರೆಯಲಿದ್ದು, ದೇಶದಲ್ಲಿಯೇ ಈ ಅತ್ಯಾಧುನಿಕ ಯಂತ್ರ ಹೊಂದಲಿರುವ 2 ನೆಯ ಆಸ್ಪತ್ರೆ ನಮ್ಮದಾಗಲಿದೆ ಎಂದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್ ಮಾತನಾಡಿ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ನೀಡಲು ಹಗಲಿರುಳು ದುಡಿಯುತ್ತಿರುವ ಎಲ್ಲಾ ವೈದ್ಯರಿಗೆ ಶುಭ ಹಾರೈಸಿದರು.

ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಸಾತ್ವಿಕ್ ಜೈನ್ ಮಾತನಾಡಿ, ಎಲ್ಲರಿಗೂ ವೈದ್ಯರ ದಿನಾಚರಣೆಯ ಶುಭಾಶಯ ತಿಳಿಸುತ್ತಾ, ಹಿರಿಯ
ಅನುಭವಿ ವೈದ್ಯರೊಂದಿಗೆ ಯುವ ಮತ್ತು ಉತ್ಸಾಹಭರಿತ ವೈದ್ಯರ ತಂಡವೇ ಈ ಆಸ್ಪತ್ರೆಯಲ್ಲಿ ರೋಗಿಗಳ ಸೇವೆಗೆ ಸದಾ ಸಿದ್ಧವಾಗಿದೆ
ಎಂದರು.
ಈ ಸಂದರ್ಭದಲ್ಲಿ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಎಲ್ಲಾ ವೈದ್ಯರನ್ನು ಸನ್ಮಾನಿಸಲಾಯಿತು. ವಿವಿಧ ಮನರಂಜನಾ ಹಾಗೂ ಫನ್ನಿ ಗೇಮ್ಸ್ಗಳಲ್ಲಿ
ಆಸ್ಪತ್ರೆಯ ವೈದ್ಯರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಖುಷಿಪಟ್ಟರು. ಆಸ್ಪತ್ರೆಯ ವೈದ್ಯರು, ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಜಗನ್ನಾಥ ಎಂ ಮತ್ತು ಸೃಜನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


